ADVERTISEMENT

ಗುರು, ಶಿಷ್ಯರದ್ದು ಶ್ರೇಷ್ಠ ಸಂಬಂಧ: ವಾಮದೇವಶ್ರೀ

​ಪ್ರಜಾವಾಣಿ ವಾರ್ತೆ
Published 1 ಮೇ 2024, 14:00 IST
Last Updated 1 ಮೇ 2024, 14:00 IST
   

ದೇವರಹಿಪ್ಪರಗಿ: ಗುರು, ಶಿಷ್ಯರ ಸಂಬಂಧ ಜಗತ್ತಿನ ಶ್ರೇಷ್ಠ ಹಾಗೂ ದೊಡ್ಡ ಸಂಬಂಧವಾಗಿದೆ ಎಂದು ಎಮ್ಮಿಗನೂರು ಹಂಪಿಸಾವಿರದೇವರಮಠದ ವಾಮದೇವ ಮಹಾಂತ ಸ್ವಾಮೀಜಿ ಹೇಳಿದರು.

ಪಟ್ಟಣದ ಮಲ್ಲಯ್ಯ ದೇವಸ್ಥಾನದ ಆವರಣದಲ್ಲಿ ಭಾನುವಾರ ನಡೆದ ಬಿ.ಎಲ್.ಡಿ.ಇ ಸಂಸ್ಥೆಯ ದಿ.ಎ.ಬಿ. ಸಾಲಕ್ಕಿ ಪ್ರೌಢಶಾಲೆಯ 1990-91 ನೇ ಸಾಲಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಗುರುವಂದನೆ ಹಾಗೂ ಸ್ನೇಹಿತರ ಸಮ್ಮಿಲನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಜಗತ್ತಿನಲ್ಲಿ ಗುರುವಿಗೆ ಉನ್ನತ ಸ್ಥಾನವಿದೆ. ಸುವರ್ಣಮಾಲೆ ಧರಿಸಿದವರಿಗಿಂತ ವರ್ಣಮಾಲೆ ಧರಿಸಿದವರು ಶ್ರೇಷ್ಠರು. ಶಿಕ್ಷಣವೇ ಶ್ರೇಷ್ಠ ಸಂಪತ್ತು ಜೊತೆಗೆ ಸ್ನೇಹಕ್ಕಿಂತ ಹಿರಿದಾದದ್ದು ಯಾವುದೂ ಇಲ್ಲ. ಇಲ್ಲಿ ಗುರು ಶಿಷ್ಯರ ಸ್ನೇಹ ಸಂಬಂಧ ಅತ್ಯಂತ ಪವಿತ್ರವಾದುದು’ ಎಂದರು.

ADVERTISEMENT

‘ಬೆಂಗಳೂರು ಮಾರತಹಳ್ಳಿ ವಿಭೂತಿಪುರ ವೀರಸಿಂಹಾಸನ ಸಂಸ್ಥಾನಮಠದ ಮಹಾಂತಲಿಂಗ ಶ್ರೀ ಮಾತನಾಡಿ, ಅಕ್ಷರಜ್ಞಾನ ನೀಡಿದ ಗುರುಗಳ ಉಪಕಾರವನ್ನು ಸ್ಮರಿಸುವ ಮೂಲಕ ಗುರುವಂದನೆ ಕಾರ್ಯಕ್ರಮ ನಡೆಯುತ್ತಿರುವುದು ಶ್ಲಾಘನೀಯ. ಇಂದು ನಾವೆಲ್ಲ ಏನಾಗಿದ್ದೇವೆಯೋ ಅದಕ್ಕೆಲ್ಲ ಕಾರಣ ನಮ್ಮ ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಿಕ್ಷಕ ವರ್ಗ. ಇವರಿಂದ ಶಾಲೆಯ ಪಾಠ ಮಾತ್ರವಲ್ಲ, ಭವಿಷ್ಯದ ಬದುಕಿನ ಪಾಠವು ಭೋದಿಸಲ್ಪಡುತ್ತದೆ’ ಎಂದರು.

ನಿವೃತ್ತ ಪ್ರಾಚಾರ್ಯ ಎಸ್.ಬಿ. ಮಿರ್ಜಿ, ತಹಶೀಲ್ದಾರ್‌ ಪ್ರಕಾಶ ಸಿಂದಗಿ, ಅಂಕಣಕಾರ ಮಂಜುನಾಥ ಜುನಗೊಂಡ, ಶಿಕ್ಷಕ ಎಸ್.ಎಂ. ಶೆಟ್ಟೆಣ್ಣವರ ಮಾತನಾಡಿದರು. ನಿವೃತ್ತ ಮುಖ್ಯಾಧ್ಯಾಪಕ ಎ.ಆರ್. ಭತಗುಣಕಿ ಅಧ್ಯಕ್ಷತೆ ವಹಿಸಿದ್ದರು.

ಶಿಕ್ಷಕರಾದ ಬಿ.ಸಿ. ಹಿರೇಮಠ, ಬಿ.ಜಿ. ಅರಳಮಟ್ಟಿ, ಎಸ್.ಎಸ್.ರಾಮಗೊಂಡ, ವಿ.ಎಮ್.ಕೌಲಗಿ, ಬ್ರಹ್ಮಾನಂದ ಪಾಟೀಲ, ಸುಶೀಲಾಬಾಯಿ ಹದನೂರ, ಶಕುಂತಲಾ ಭಂಡಕ್ಕ, ಎಸ್.ಎಸ್. ಹುರಕಡ್ಲಿ, ಮಲ್ಲಮ್ಮ ನಾಯ್ಕೋಡಿ, ಅಶೋಕ ಗಚ್ಚಿನಮಠ, ಜೆ.ಆರ್. ದಾನಗೊಂಡ, ಶಾಂತಪ್ಪ ದೇಸಾಯಿ, ಎಸ್.ಎಂ.ಬಟವಾಲ್ ಹಾಗೂ ಜಿ.ಜಿ. ಜುಮನಾಳ ಅವರನ್ನು ಸನ್ಮಾನಿಸಲಾಯಿತು. ಅಗಲಿದ ಶಿಕ್ಷಕರು, ವಿದ್ಯಾರ್ಥಿ–ವಿದ್ಯಾರ್ಥಿನಿಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ವಿಶೇಷ ಸಾಧನೆ ಮಾಡಿದ ಬಸವರಾಜ ಕೌಲಗಿ, ಬಾಳಯ್ಯ ಇಂಡಿಮಠ, ಈರಣಗೌಡ ಪಾಟೀಲ, ಅಯ್ಯನಗೌಡ ಪಾಟೀಲ, ಅನೀಲ ಪೋರವಾಲ್, ಕಾಶೀನಾಥ ಸಾಲಕ್ಕಿ, ಶಂಕರಗೌಡ ಪಾಟೀಲ, ಸಿದ್ದು ಮೇಲಿನಮನಿ, ಶ್ರೀಕಾಂತ ಕಾಖಂಡಕಿ, ಕಮಲಾಕ್ಷಿ ಕುಂಬಾರ, ಸೋಮನಗೌಡ ಬಿರಾದಾರ, ಸಬಿನಾ ಕಲಾಲ್ ಅವರನ್ನು ಸನ್ಮಾನಿಸಲಾಯಿತು.

ಶಿವಾನಂದ ಅಸಂತಾಪುರ, ಸುರೇಶ ನಾಯಿಕ್, ವಸಂತ ನಾಡಗೌಡ, ಸಂಜೀವ ವಗ್ಗರ, ರಾಜು ನಾಯ್ಕರ್, ರಮೇಶ ಮಣೂರ, ಬಸನಗೌಡ ಪಾಟೀಲ, ಕುಮಾರಸ್ವಾಮಿ ಹಿರೇಮಠ, ಭಾರತಿ ನಾಡಗೌಡ, ಸುಜಾತಾ ಈಳಗೇರ, ಕಾಶೀಬಾಯಿ ಪಾಟೀಲ, ಕಾವೇರಿ ಬಡಿಗೇರ, ನಾಗಮ್ಮಾ ಕೋರಿ, ಸುನೀತಾ ನಾಡಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.