ವಿಜಯಪುರ: ಇಲ್ಲಿನ ಜುಮ್ಮಾ ಮಸೀದಿ ರಸ್ತೆಯಲ್ಲಿರುವ ಆದಿಲ್ ಶಾಹಿ ಅರಸರ ಕಾಲದ ಐತಿಹಾಸಿಕ ಸ್ಮಾರಕ ಮೆಹತರ್ ಮಹಲ್‌ಗೆ ಗುರುವಾರ ಸಂಜೆ ಸಿಡಿಲು ಬಡಿದು, ಮಿನಾರ್‌ನ ಗೋಪುರಕ್ಕೆ ಹಾನಿಯಾಗಿದೆ.
ಮೆಹತರ್ ಮಹಲ್ ಎದುರು ರಸ್ತೆಯಲ್ಲಿ ನಿಲ್ಲಿಸಿದ್ದ ಒಂದು ಕಾರು, ಎರಡು ಬೈಕುಗಳ ಮೇಲೆ ಮಿನಾರ್‌ನ ಕಲ್ಲುಗಳು ಬಿದ್ದು, ಜಖಂ ಆಗಿವೆ. ಈ ಸಂದರ್ಭದಲ್ಲಿ ಸ್ಥಳದಲ್ಲಿ ಯಾರೂ ಇರದ ಕಾರಣ ಭಾರೀ ಅನಾಹುತ ತಪ್ಪಿದೆ.
ವಿಜಯಪುರದ ಮಿನಾರ್‌ನ ಗೋಪುರಕ್ಕೆ ಸಿಡಿಲು ಬಡಿದ ಪರಿಣಾಮ ಗೋಪುರದ ಭಾಗ ಕಾರಿನ ಮೇಲೆ ಬಿದ್ದು ಹಾನಿಯಾಗಿದೆ
ವಿಜಯಪುರದ ಮಿನಾರ್‌ನ ಗೋಪುರಕ್ಕೆ ಸಿಡಿಲು ಬಡಿದ ಪರಿಣಾಮ ಗೋಪುರದ ಭಾಗ ಹಾನಿಯಾಗಿದೆ
ವಿಜಯಪುರದ ಮಿನಾರ್‌ನ ಗೋಪುರಕ್ಕೆ ಸಿಡಿಲು ಬಡಿದ ಪರಿಣಾಮ ಗೋಪುರದ ಭಾಗ ಕಾರಿನ ಮೇಲೆ ಬಿದ್ದು ಹಾನಿಯಾಗಿದೆ
ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಸುಪರ್ದಿಯಲ್ಲಿರುವ ಈ ಸ್ಮಾರಕವನ್ನು 17ನೇ ಶತಮಾನದಲ್ಲಿ ಎರಡನೇ ಇಬ್ರಾಹಿಂ ಆದಿಲ್‌ಶಾಹ ನಿರ್ಮಿಸಿದ್ದರು. ಕಲೆ ಮತ್ತು ಸೌಂದರ್ಯಕ್ಕೆ ಈ ಸ್ಮಾರಕವು ಹೆಸರಾಗಿತ್ತು.
‘ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯು ಈ ಸ್ಮಾರಕಕ್ಕೆ ಸಿಡಿಲು ನಿರೋಧ ಯಂತ್ರವನ್ನು ಅಳವಡಿಸದೇ ನಿರ್ಲಕ್ಷ್ಯ ವಹಿಸಿದ್ದ ಪರಿಣಾಮ ಘಟನೆ ನಡೆದಿದೆ. ಹಾನಿಯಾಗಿರುವ ಮಿನಾರ್ ಅನ್ನು ದುರಸ್ತಿಗೊಳಿಸಿ, ಅದರ ರಕ್ಷಣೆಗೆ ಆದ್ಯತೆ ನೀಡಬೇಕು’ ಎಂದು ಸ್ಥಳೀಯರಾದ ಪೀಟರ್ ಅಲೆಕ್ಸಾಂಡರ್ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.