ADVERTISEMENT

ವಿಜಯಪುರ ಮಹಾನಗರ ಪಾಲಿಕೆ ಉಪ ಚುನಾವಣೆ: ಬಿಜೆಪಿಗೆ ಜಯ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2024, 5:42 IST
Last Updated 26 ನವೆಂಬರ್ 2024, 5:42 IST
   

ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಯ ವಾರ್ಡ್ ನಂ.29ಕ್ಕೆ ನಡೆದ ಉಪ ಚುನಾವಣೆಯ ಮತ ಎಣಿಕೆ ಕಾರ್ಯ ಪೂರ್ಣ ಗೊಂಡಿದ್ದು, ಭಾರತೀಯ ಜನತಾ ಪಾರ್ಟಿಯ ಗಿರೀಶ ಬಿರಾದಾರ ಅವರು 2754 ಮತಗಳನ್ನು ಪಡೆಯುವ ಮೂಲಕ ಆಯ್ಕೆಯಾಗಿದ್ದಾರೆ.

ವಾರ್ಡ್‌ ನಂ.29ಕ್ಕೆ ನಡೆದ ಉಪ ಚುನಾವಣೆಗೆ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಭಾಗಪ್ಪ ಏಳಗಂಟಿ 1762 ಮತಗಳನ್ನು ಪಡೆದಿದ್ದಾರೆ. 38 ನೋಟಾ ಮತಗಳು ಚಲಾವಣೆಯಾಗಿವೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.

ಕಳೆದ ಶನಿವಾರ ನಡೆದ ಉಪ ಚುನಾವಣೆಯಲ್ಲಿ ಶೇ 46.18 ರಷ್ಟು ಮತದಾನವಾಗಿತ್ತು.

ADVERTISEMENT

ವಾರ್ಡ್‌ ನಂ.29ರ ಸದಸ್ಯರಾಗಿದ್ದ ಬಿಜೆಪಿಯ ವಿಜಯಕುಮಾರ ಬಿರಾದಾರ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಕಾರಣಕ್ಕೆ ಉಪಚುನಾವಣೆ ನಡೆದಿತ್ತು.

ಒಟ್ಟು 35 ಸದಸ್ಯ ಸ್ಥಾನ ಹೊಂದಿರುವ ಪಾಲಿಕೆಯಲ್ಲಿ ‌ಸದ್ಯ ಬಿಜೆಪಿ 17, ಕಾಂಗ್ರೆಸ್10, ಎಎಂಐಎಂ 2, ಜೆಡಿಎಸ್ 1 ಹಾಗೂ ಪಕ್ಷೇತರ 5 ಸ್ಥಾನ ಹೊಂದಿವೆ.

ಸದ್ಯ ಕಾಂಗ್ರೆಸ್ ಅಧಿಕಾರದಲ್ಲಿ ಇದೆ.‌ ಜನವರಿಯಲ್ಲಿ ಹಾಲಿ ಮೇಯರ್‌, ಉಪ ಮೇಯರ್‌ ಅವಧಿ ಮುಗಿಯಲ್ಲಿದ್ದು, ಮುಂದಿನ ಅವಧಿಗೆ ಪಾಲಿಕೆ ಗದ್ದುಗೆ ಹಿಡಿಲು ಬಿಜೆಪಿ, ಕಾಂಗ್ರೆಸ್‌ ನಡುವೆ ಕಸರತ್ತು ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.