ADVERTISEMENT

ಚಡಚಣ | ಧೂಳಖೇಡ ಚೆಕ್ ಪೋಸ್ಟ್‌ನಲ್ಲಿ ₹4.5 ಲಕ್ಷ ನಗದು ವಶ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2024, 16:15 IST
Last Updated 20 ಮಾರ್ಚ್ 2024, 16:15 IST
ಧೂಳಖೇಡ ಚೆಕ್‌ಪೋಸ್ಟ್‌ ಮೂಲಕ ಹಣ ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ದಾಖಲೆ ರಹಿತ ನಗದನ್ನು ಝಳಕಿ ಪೊಲೀಸ್‌ ಸಿಬ್ಬಂದಿ ಬುಧವಾರ ವಶಕ್ಕೆ ಪಡೆದುಕೊಂಡಿದ್ದಾರೆ
ಧೂಳಖೇಡ ಚೆಕ್‌ಪೋಸ್ಟ್‌ ಮೂಲಕ ಹಣ ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ದಾಖಲೆ ರಹಿತ ನಗದನ್ನು ಝಳಕಿ ಪೊಲೀಸ್‌ ಸಿಬ್ಬಂದಿ ಬುಧವಾರ ವಶಕ್ಕೆ ಪಡೆದುಕೊಂಡಿದ್ದಾರೆ   

ಚಡಚಣ: ಲೋಕಸಭಾ ಚುನಾವಣಾ ಹಿನ್ನೆಲೆ ಮಹಾರಾಷ್ಟ್ರ ರಾಜ್ಯದ ಮುಖಾಂತರ ಕರ್ನಾಟಕ ರಾಜ್ಯಕ್ಕೆ ಒಳಗೆ ಬರುವ ಪ್ರತಿಯೊಂದು ವಾಹನಗಳ ಮೇಲೆ ತಪಾಸಣೆ ಮಾಡುತ್ತಿದ್ದಾಗ ಧೂಳಖೇಡ ಚೆಕ್ ಪೋಸ್ಟ್ ನಲ್ಲಿ ದಾಖಲೆ ರಹಿತವಾದ ₹4.50 ಲಕ್ಷ ಬುಧವಾರ ಜಪ್ತಿ ಮಾಡಲಾಗಿದೆ.

ಮಹಾರಾಷ್ಟ್ರದ ಔರಂಗಾಬಾದ ಜಿಲ್ಲೆಯ ರೋಶನ ಗಜಾನನ ಕರನಾಶೆ ಅವರು ಯಾವುದೇ ಅಧಿಕೃತ ದಾಖಲೆ ಇಲ್ಲದೆ ಕಾರಿನಲ್ಲಿ ನಗದು ಹಣವನ್ನು ಧೂಳಖೇಡ ಮಾರ್ಗದಿಂದ ಬೆಂಗಳೂರ ಕಡೆ ಹೊರಟಿದ್ದರು. ಧೂಳಖೇಡ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ವೇಳೆ ಈ ಹಣ ಜಪ್ತಿ ಮಾಡಿ ಜಿಲ್ಲಾ ಸೀಜರ್ ಕಮೀಟಿಯವರಿಗೆ ಒಪ್ಪಸಲಾಗಿದೆ.

ಎಸ್‌ಎಸ್‌ಟಿಟಿಎಂ ನಂ 13 ರ ಅಧಿಕಾರಿಗಳಾದ ಪರಮೇಶ್ವರ ತಳವಾರ, ಎಸ್ ಜೆ ಪೂಜಾರಿ, ಎನ್ ಎಸ್ ಸಾತಲಗಾಂವ, ಪಿಎಸ್‌ಐ ಹೊನ್ನಪ್ಪ ತಳವಾರ, ಇದ್ದರು. ಝಳಕಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT