ನಾಲತವಾಡ: ಪಟ್ಟಣದಲ್ಲಿ ಪುನೀತ್‌ರಾಜಕುಮಾರ್ ಅವರ 3ನೇ ಪುಣ್ಯಸ್ಮರಣೆಯನ್ನು ಅಭಿಮಾನಿಗಳು ಆಚರಿಸಿದರು.
ಅಪ್ಪು ಅಭಿಮಾನಿ ಪ್ರಕಾಶ ಶಹಾಪೂರ ಉಚಿತವಾಗಿ ಕ್ಷೌರ ಮಾಡಿದರು. ನೂರಾರು ಯುವಕರು, ವಿದ್ಯಾರ್ಥಿಗಳು ಸರದಿಯಲ್ಲಿ ನಿಂತು ಹೇರ್ ಕಟ್ ಮಾಡಿಸಿಕೊಂಡರು.
ದುದ್ದಗಿ ಕಾಂಪ್ಲೆಕ್ಸ್ ಮುಂಭಾಗದಲ್ಲಿ ಅಪ್ಪು ಅಭಿಮಾನಿ ಬಳಗದ ಮುಖಂಡ ಪ್ರಭುರಾಜ ದುದ್ದಗಿಯವರು ಅಪ್ಪು ಅವರ ಭಾವಚಿತ್ರಕ್ಕೆ ಬೃಹತ್ ಹೂ ಮಾಲೆ ಹಾಕಿ ಪುಷ್ಪ ನಮನ ಸಲ್ಲಿಸಿದರು.
ಪುನಿತ್ ರಾಜಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಮೇಣದ ಬತ್ತಿ ಹಚ್ಚಿ ‘ಅಮರ್ ಹೈ ಅಮರ್ ಹೈ’ ಎಂದು ಜಯಘೋಷ ಹಾಕಿದರು.
ಸಂಗಮೇಶ ಮೇಟಿ ಅವರು ಅಪ್ಪು ಜೀವನ ಸಾಧನೆಯ ಬಗ್ಗೆ ಮಾತನಾಡಿದರು. ಪ್ರಭು ದುದ್ದಗಿ, ಗುರುಪ್ರಸಾದ ದೇಶಮುಖ, ಸಿದ್ದು ಕುರಿ, ವೀರೇಶ ಅಪ್ಪೂಜಿ, ಮಹಾಂತೇಶ ಮೆಣೆದಾಳಮಠ, ಮಹಾಂತೇಶ ಮಠ,ಬಾಪುಗೌಡ ಹಂಪನಗೌಡ್ರ, ವಿಜಯಮಹಾಂತೇಶ ಲಿಂಗದಳ್ಳಿ,ಶರಣು ಹಂಪನಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.