ADVERTISEMENT

ವಿಜಯಪುರ | ಅಂತಿಮ ಘಟ್ಟ ತಲುಪಿದ ರಕ್ಷಣಾ ಕಾರ್ಯಾಚರಣೆ: ಜೀವಂತವಾಗಿರುವ ಮಗು

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2024, 7:44 IST
Last Updated 4 ಏಪ್ರಿಲ್ 2024, 7:44 IST
   

ವಿಜಯಪುರ: ಕೊಳವೆಬಾವಿಯಲ್ಲಿ ಸಿಲುಕಿಕೊಂಡಿರುವ ಮಗುವಿನ‌ ರಕ್ಷಣಾ ಕಾರ್ಯಾಚರಣೆ ಅಂತಿಮ ಘಟ್ಟಕ್ಕೆ ತಲುಪಿದೆ.

ಕೆಲವೇ ಹೊತ್ತಿನಲ್ಲಿ ಮಗುವನ್ನು ಹೊರತರಲು ಎನ್ ಡಿಆರ್ ಎಫ್, ಎಸ್ ಡಿ ಆರ್ ಎಫ್ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

ರಕ್ಷಣಾ ಸಿಬ್ಬಂದಿ ಮಗುವಿನ ಹತ್ತಿರಕ್ಕೆ ತಲುಪಿದ್ದು, ಮಗುವನ್ನು ತಲೆಯನ್ನು ಕೈಯಿಂದ ಮುಟ್ಟಿದ್ದಾರೆ.

ADVERTISEMENT

ಮಗು ಜೀವಂತವಾಗಿದ್ದು, ಅಳುತ್ತಿರುವುವುದು ಕೇಳಿಸುತ್ತಿದೆ ಎಂದು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಸಿಬ್ಬಂದಿ ರವಿ ಭಜಂತ್ರಿ 'ಪ್ರಜಾವಾಣಿ' ಗೆ ಖಚಿತ ಪಡಿಸಿದರು.

ಮಗು ತಲೆ ಕೆಳಗಾಗಿ ಬಿದ್ದಿದ್ದು, ಹೊರ ತೆಗೆಯಲು ಮಗುವಿನ ಎರಡು ಭುಜಗಳಿಗೆ ಅಕ್ಕಪಕ್ಕದ ಕಲ್ಲುಗಳು ಅಡಚಣೆಯಾಗಿದೆ. ಈ ನಿಟ್ಟಿನಲ್ಲಿ ಅಡೆತಡೆ ನಿವಾರಣೆಗೆ ಸಿಬ್ಬಂದಿ ಸೂಕ್ಷ್ಮವಾಗಿ ಕಾರ್ಯಾಚರಣೆ ನಡೆಸಿದ್ದಾರೆ.

ಆಸ್ಪತ್ರೆ ಗೆ ಕರೆದೊಯ್ಯಲು ಸಿದ್ಧತೆ:

ಮಗುವನ್ನು ಹೊರ ತೆಗೆದ ತಕ್ಷಣವೇ ಪ್ರಥಮ ಚಿಕಿತ್ಸೆ ನೀಡಿ, ಆಸ್ಪತ್ರೆಗೆ ಕರೆದೊಯ್ಯಲು ವೈದ್ಯಕೀಯ ಸಿಬ್ಬಂದಿ ಅಂಬುಲೆನ್ಸ್‌ನೊಂದಿಗೆ ಸಕಲ ಸಿದ್ದತೆ ಮಾಡಿಕೊಂಡಿದ್ದಾರೆ.

ಅಂಬುಲೆನ್ಸ್ ಸಾಗುವ ಮಾರ್ಗದಲ್ಲಿ ಸಂಚಾರಕ್ಕೆ ತೊಂದರೆ ಆಗದಂತೆ ಪೊಲೀಸರು ಜನ, ವಾಹನಗಳನ್ನು ತೆರವುಗೊಳಿಸುತ್ತಿದ್ದಾರೆ.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.