ADVERTISEMENT

ಹೆಲಿಕಾಫ್ಟರ್‌ನಲ್ಲಿ ವಿಜಯಪುರ ದರ್ಶನ

​ಪ್ರಜಾವಾಣಿ ವಾರ್ತೆ
Published 13 ಜನವರಿ 2023, 14:29 IST
Last Updated 13 ಜನವರಿ 2023, 14:29 IST
ಹೆಲಿಕಾಫ್ಟರ್‌
ಹೆಲಿಕಾಫ್ಟರ್‌   

ವಿಜಯಪುರ: ವಿಜಯಪುರ ನಗರ, ಜಿಲ್ಲೆಯ ಜನತೆಗೆ ಹಾಗೂ ಪ್ರವಾಸಿಗರಿಗೆ ವಿಶ್ವವಿಖ್ಯಾತ, ಐತಿಹಾಸಿಕ ಸ್ಮಾರಕಗಳನ್ನು ಹೆಲಿಕಾಫ್ಟರ್‌ ಮೂಲಕ ಆಕಾಶದಿಂದ ನೋಡುವ ಅವಕಾಶ ‘ಅಮೃತ ಕನ್ಸಟ್ರಕ್ಷನ್‌’ ಸಂಸ್ಥೆ ಕಲ್ಪಿಸಿದೆ.

ಶುಕ್ರವಾರದಿಂದ ಆರಂಭವಾಗಿರುವ ಹೆಲಿಕಾಫ್ಟರ್‌ ರೈಡ್‌ ಜನವರಿ 16ರ ವರೆಗೆ ಪ್ರತಿದಿನ ಬೆಳಿಗ್ಗೆ 8ರಿಂದ ಸಂಜೆ 6ರ ವರೆಗೆ ಅವಕಾಶ ಇದೆ. ಸೋಲಾಪುರ ರಸ್ತೆಯ ಬಿಎಲ್‌ಡಿಇ ಹೊಸ ಕ್ಯಾಂಪಸ್‌ ಆವರಣದಿಂದ ಹೆಲಿಕಾಫ್ಟರ್‌ ಹಾರಾಟ ನಡೆಯಲಿದೆ.

ಐತಿಹಾಸಿಕ ಗೋಳಗುಮ್ಮಟ, ಶಿವಗಿರಿ, ಬಾರಾ ಕಮಾನ್‌, ಇಬ್ರಾಹಿಂ ರೋಜಾ ಸೇರಿದಂತೆ ಐತಿಹಾಸಿಕ ಸ್ಮಾರಕಗಳ ಜೊತೆಗೆ ಇಡೀ ವಿಜಯಪುರ ನಗರವನ್ನು ಹೆಲಿಕಾಫ್ಟರ್‌ನಲ್ಲಿ ಹಾರಾಡುವ ಮೂಲಕ ಕಣ್ತುಂಬಿಕೊಳ್ಳಬಹುದು.

ADVERTISEMENT

ಹೆಲಿಕಾಫ್ಟರ್‌ ರೈಡ್‌ಗೆ ₹3999 ರಿಯಾಯಿತಿ ದರ ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 7483442309 ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.