ADVERTISEMENT

ವಿವೇಕಾನಂದರ ತತ್ವಾದರ್ಶ ಅಳವಡಿಸಿಕೊಳ್ಳಿ: ಬಿ.ಎಸ್.ಕಡಕಬಾವಿ

​ಪ್ರಜಾವಾಣಿ ವಾರ್ತೆ
Published 12 ಜನವರಿ 2024, 14:33 IST
Last Updated 12 ಜನವರಿ 2024, 14:33 IST
ವಿವೇಕಾನಂದ ಜಯಂತ್ಯುತ್ಸವದ ಅಂಗವಾಗಿ  ಇಂಡಿ ಪಟ್ಟಣದ ಸ್ವಾಮಿ ವಿವೇಕಾನಂದ ಸರ್ಕಲ್‌ನಲ್ಲಿ ಇರುವ ವಿವೇಕಾನಂದ ಮೂರ್ತಿಗೆ ಅಲಂಕಾರ ಮಾಡಲಾಗಿತ್ತು
ವಿವೇಕಾನಂದ ಜಯಂತ್ಯುತ್ಸವದ ಅಂಗವಾಗಿ  ಇಂಡಿ ಪಟ್ಟಣದ ಸ್ವಾಮಿ ವಿವೇಕಾನಂದ ಸರ್ಕಲ್‌ನಲ್ಲಿ ಇರುವ ವಿವೇಕಾನಂದ ಮೂರ್ತಿಗೆ ಅಲಂಕಾರ ಮಾಡಲಾಗಿತ್ತು   

ಇಂಡಿ: ಸ್ವಾಮಿ ವಿವೇಕಾನಂದರ ತತ್ವ, ಸಿದ್ದಾಂತಗಳು ಯುವ ಪೀಳಿಗೆಗೆ ಆದರ್ಶವಾಗಿದ್ದು, ಅವುಗಳನ್ನು ಯುವಜನರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಹಶೀಲ್ದಾರ್‌ ಬಿ.ಎಸ್.ಕಡಕಬಾವಿ ಹೇಳಿದರು.

ಇಂಡಿ ಪಟ್ಟಣದ ಸ್ವಾಮಿ ವಿವೇಕಾನಂದ ಸರ್ಕಲ್‌ನಲ್ಲಿ  ಶುಕ್ರವಾರ ಸ್ವಾಮಿ ವಿವೇಕಾನಂದರ ಜಯಂತ್ಯುತ್ಸವದ ಅಂಗವಾಗಿ ಸ್ವಾಮಿ ವಿವೇಕಾನಂದರ ಮೂರ್ತಿಗೆ ಪೂಜೆ ಸಲ್ಲಿಸಿ ಮಾತನಾಡಿದರು.

ಸ್ವಾಮಿ ವಿವೇಕಾನಂದ ಯುವ ಶಕ್ತಿ ಸಂಘದ ಅಧ್ಯಕ್ಷ ರಾಮಸಿಂಗ ಕನ್ನೂಳ್ಳಿ, ಅವಿನಾಶ ಬಗಲಿ ಮಾತನಾಡಿದರು. ದಿಂಡಿ ಪಟ್ಟಣದ ಮುಖಂಡರಾದ ಜಗದೀಶ ಕ್ಷತ್ರಿ, ಸತೀಶ ಕುಂಬಾರ, ಶ್ರೀಕಾಂತ ಕುಡಿಗನೂರ, ವೆಂಕಟೇಶ ಕುಲಕರ್ಣಿ ಮಲ್ಲಿಕಾರ್ಜುನ್  ಹತ್ತಿ,  ಅರವಿಂದ ಪಾಟೀಲ, ಚಂದು ದೇವರ, ನಾಗರಾಜ ದಶವಂತ, ಆನಂದ ದೇವರ, ಬಾಳು ಮುಳಜಿ, ಪ್ರಕಾಶ ಬಿರಾದಾರ, ಸಂತೋಷ ಪಾಟೀಲ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.