ವಿಜಯಪುರ: ರಾಜ್ಯದಲ್ಲಿ ಸರ್ಕಾರ ಆಡಳಿತ ಮಾಡುತ್ತಿಲ್ಲ, ಮಸೀದಿಗಳು ಆಡಳಿತ ಮಾಡುತ್ತಿವೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ಆಪಾದಿಸಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಸೀದಿಗಳಿಂದ ರಾಜ್ಯ ಸರ್ಕಾರಕ್ಕೆ ಪತ್ರ ಹೋಗಿದ್ದು, ಆ ಪತ್ರದಲ್ಲಿ ಇಂತಿಂತ ಆಸ್ತಿಗಳು ನಮಗೆ ಸೇರಬೇಕು, ಇವೆಲ್ಲ ವಕ್ಫ್ ಆಸ್ತಿ ಎಂದು ಹೇಳಲಾಗಿದೆ. ಆ ಪತ್ರ ಆಧರಿಸಿ ಸರ್ಕಾರ ರೈತರಿಗೆ ನೋಟಿಸ್ ನೀಡಿದೆ ಎಂದು ದೂರಿದರು.
ವಕ್ಫ್ ಬೋರ್ಡ್ ಕೆಲಸ ಖಬರಸ್ಥಾನ, ಮಸೀದಿ ಜಾಗವನ್ನು ಕಾಪಾಡುವುದು. ಆದರೆ, ವಕ್ಫ್ ಬೋರ್ಡ್ ರೈತರ, ದಲಿತರ, ಹಿಂದುಳಿದವರ ಆಸ್ತಿಯನ್ನು ಕದಿಯುವ ಮೂಲಕ ಈ ರಾಜ್ಯವನ್ನು ಖಬರಸ್ಥಾನ ಮಾಡಲು ಹೊರಟಿದ್ದು, ಇದಕ್ಕೆ ಕಾಂಗ್ರೆಸ್ ಎಂಬ ಖಬರಸ್ಥಾನ ಪಾರ್ಟಿ ಬೆಂಬಲವಾಗಿದೆ. ಇದು ಹಿಂದುಗಳ ಮೇಲೆ ಆಗುತ್ತಿರುವ ದೊಡ್ಡ ಪ್ರಹಾರವಾಗಿದೆ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.