ಆಲಮಟ್ಟಿ: ಆಲಮಟ್ಟಿ ಜಲಾಶಯಕ್ಕೆ ಮಂಗಳವಾರ ಒಂದೇ ದಿನ 21,251 ಕ್ಯುಸೆಕ್ (1.83 ಟಿಎಂಸಿ ಅಡಿ) ನೀರು ಹರಿದು ಬಂದಿದೆ.
ಆಲಮಟ್ಟಿ ಸುತ್ತಮುತ್ತಲಿನ ಹಿನ್ನೀರಿನ ಪ್ರದೇಶದಲ್ಲಿ ಸುರಿದ ಭಾರಿ ಮಳೆಯ ಕಾರಣ ಒಳಹರಿವು ಹೆಚ್ಚಿದೆ. ಇದರಿಂದ ಜಲಾಶಯದ ಮಟ್ಟವೂ 508.54 ಮೀಟರ್‌ಗೆ ಏರಿಕೆಯಾಗಿದೆ. ಜಲಾಶಯದಲ್ಲಿ 23.471 ಟಿಎಂಸಿ ಅಡಿ ನೀರಿದ್ದು, 5.85 ಟಿಎಂಸಿ ಅಡಿ ಲೈವ್ ನೀರು (ಜೀವ ಜಲ) ಇದೆ. ಜಲಾಶಯದ ಹಿನ್ನೀರಿನ ಬಳಕೆ 430 ಕ್ಯುಸೆಕ್ ಇದೆ ಎಂದು ಜಲಾಶಯದ ಮೂಲಗಳು ತಿಳಿಸಿವೆ.
ಮಳೆ: ಮಂಗಳವಾರ ಮಳೆಯ ಅಬ್ಬರ ತಗ್ಗಿದೆ. ಆಲಮಟ್ಟಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೆಲ ಕಾಲ ಜಿಟಿ ಜಿಟಿ ಮಳೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.