ವಿಜಯಪುರ: ‘2023ರ ಮೇ 6ರಂದು ವಿಜಯಪುರದಲ್ಲಿ ನಡೆದ ರೌಡಿಶೀಟರ್ ಹೈದರ್ ನದಾಫ್ ಕೊಲೆ ಪ್ರಕರಣದಲ್ಲಿ ಮೌಲ್ವಿ ತನ್ವೀರ್ ಹಾಶ್ಮಿ ಪ್ರಮುಖ ಆರೋಪಿ. ಚಾರ್ಜ್ ಶೀಟ್‌ನಿಂದ ಅವರ ಹೆಸರು ಕೈಬಿಟ್ಟಿದ್ದು ಏಕೆ’ ಎಂದು ಬಸನಗೌಡ ಪಾಟೀಲ ಯತ್ನಾಳ ಪ್ರಶ್ನಿಸಿದ್ದಾರೆ.
‘ಎಕ್ಸ್’ ಖಾತೆಯಲ್ಲಿ ಎಫ್ಐಆರ್ ಪ್ರತಿ ಹಂಚಿಕೊಂಡಿರುವ ಅವರು, ‘ಯಾರ ಒತ್ತಡದ ಮೇರೆಗೆ ಮೌಲ್ವಿಯ ಹೆಸರು ಕೈಬಿಡಲಾಗಿದೆ ಎಂಬುದಕ್ಕೆ ಸರ್ಕಾರ ಸ್ಪಷ್ಟನೆ ನೀಡಲಿ’ ಎಂದು ಒತ್ತಾಯಿಸಿದ್ದಾರೆ.
ಕೊಲೆಯಾದ ರೌಡಿಶೀಟರ್ ಪತ್ನಿ ವಿಜಯಪುರ ಪಾಲಿಕೆ ಸದಸ್ಯೆ. ಪತಿ ಕೊಲೆಯ ಸಾಕ್ಷಿಯನ್ನು ಮೌಲ್ವಿ ನಾಶಪಡಿಸುವ ಸಾಧ್ಯತೆ ಇದೆ. ಮೌಲ್ವಿ ನಮ್ಮ ಕುಟುಂಬಕ್ಕೆ, ಕಾರ್ಯಕರ್ತರಿಗೆ ಬೆದರಿಕೆ ಒಡ್ಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿರುವ ಪತ್ರವನ್ನು ಯತ್ನಾಳ ಹಂಚಿಕೊಂಡಿದ್ದಾರೆ.
‘ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ ಪಾಲ್ಗೊಂಡ ಕಾರ್ಯಕ್ರಮದ ವೇದಿಕೆ ಮೇಲೆ ಕೊಲೆ ಆರೋಪಿಗೆ ಏನು ಕೆಲಸ? ಬಡ ಕುಟುಂಬಕ್ಕೆ ಬೆದರಿಕೆ ಒಡ್ಡುವ ವ್ಯಕ್ತಿಯೊಂದಿಗೆ ವೇದಿಕೆ ಹಂಚಿಕೊಳ್ಳುವ ಅವಶ್ಯಕತೆ ಮುಖ್ಯಮಂತ್ರಿಯವರಿಗೆ ಏನಿತ್ತು’ ಎಂದು ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.