ತಾಳಿಕೋಟೆ: ‘ಯೋಗಶಾಸ್ತ್ರ ತರ್ಕವಲ್ಲ; ಸಂಶೋಧನೆ, ವಿಜ್ಞಾನವಾಗಿದೆ. ಉತ್ತಮ ಆರೋಗ್ಯಕ್ಕೆ ಆಸನಗಳು, ಮುದ್ರೆಗಳು, ಪ್ರಾಣಾಯಾಮ ಅನುಸರಣೆ ಮುಖ್ಯವಾಗಿವೆ’ ಎಂದು ಕಾತ್ರಾಳ ಗುರುದೇವಾಶ್ರಮದ ಅಂತರಾಷ್ಟ್ರೀಯ ಯೋಗಾಚಾರ್ಯ ಅಮೃತಾನಂದ ಸ್ವಾಮೀಜಿ ಹೇಳಿದರು.
ಪಟ್ಟಣದ ಕೆಬಿಎಂಪಿಎಸ್ ಶಾಲಾ ಆವರಣದಲ್ಲಿ ಯೋಗೋತ್ಸವ ಸಮಿತಿ ವತಿಯಿಂದ ನ.12 ರಿಂದ ನ.22 ರವರೆಗೆ ಉಚಿತವಾಗಿ ಜರುಗಿದ ಹಿಮಾಲಯನ್ ಧ್ಯಾನಯೋಗ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಶುಕ್ರವಾರ ಅವರು ಮಾತನಾಡಿದರು.
‘ಪತಂಜಲಿ ಮಹರ್ಷಿ ಬರೆದ 200 ಸೂತ್ರಗಳಲ್ಲಿ‘ಸ್ಥಿರ ಸುಖಂ ಆಸನ’ ಎಲ್ಲ ಆಸನಗಳಿಗಿಂದ ಮಿಗಿಲು ಎಂದಿದ್ದಾರೆ. ಉಳಿದ ಆಸನಗಳು ಒಂದು ಭಾಗವಾದರೆ ಸ್ಥಿರಸುಖ ಆಸನ ಒಂದು ಭಾಗ ಎಂದಿರುವುದರಿಂದ ಇದನ್ನು ರೂಢಿಸಿಕೊಂಡವರಿಗೆ ರೋಗಬಾಧೆ ದೂರವಾಗುತ್ತವೆ. ವಾಹನಕ್ಕೆ ಶುದ್ಧ ಎಣ್ಣೆ ಹಾಕಿದಂತೆ, ನಮ್ಮ ದೇಹಕ್ಕೂ ಶುದ್ದ ಆಹಾರ ನೀಡಬೇಕು ಆದರೆ ನಾವು ಏನೆಲ್ಲ ಹಾಕುತ್ತಿದ್ದೇವೆ ಆಲೋಚಿಸಿನೋಡಿ. ಶರೀರವನ್ನು ಶುದ್ಧ, ಸದೃಢವಾಗಿಸಲು, ಆರೋಗ್ಯಪೂರ್ಣತೆಗೆ ಯೋಗಾಭ್ಯಾಸ ನೆರವಾಗುತ್ತದೆ. ಉತ್ತಮ ಆರೋಗ್ಯ ಹೊಂದಿದವರು ಮಾತ್ರ ಸಾಧನೆ ಮಾಡಲು ಸಾಧ್ಯವಿದೆ’ ಎಂದರು
ವೇದಿಕೆಯಲ್ಲಿ ಯೋಗಗುರು ನಿರಂಜನ ಸ್ವಾಮೀಜಿ, ಸಿದ್ಧರಾಮೇಶ್ವರ ಹಿರೇಮಠ ಗೋಟಚಿಂಚೊಳಿ, ನಾಗಠಾಣದ ಪ್ರಜ್ಞಾನಂದ ಸ್ವಾಮೀಜಿ ಬಸವಾನಂದ ಸ್ವಾಮೀಜಿ ಇದ್ದರು.
ಡಾ.ವಿ.ಎಸ್.ಕಾರ್ಚಿ, ಡಾ.ಪ್ರಭುಗೌಡ ಬಿ.ಎಲ್., ಆರ್.ಎಸ್.ಪಾಟೀಲ ಕೂಚಬಾಳ, ಡಾ.ಶ್ರಿಶೈಲ ಹುಕ್ಕೇರಿ, ಎಸ್.ಎಂ.ಸಜ್ಜನ, ಪ್ರಭುಗೌಡ ಮದರಕಲ್ಲ, ಚಿದಂಬರ ಕರಮರಕರ, ಅಶೋಕ ಹಂಚಲಿ, ಶ್ರೀಕಾಂತ ಪತ್ತಾರ, ಸಾಹೇಬಗೌಡ ಬಿರಾದಾರ, ಸೂಳಿಭಾವಿ, ಜೈಸಿಂಗ ಮೂಲಿಮನಿ, ಅಶೋಕ ಚಿನಗುಡಿ, ಪ್ರಭು ಸಣ್ಣಕ್ಕಿ, ಮಹಾಂತೇಶ ಮುರಾಳ, ಸಿದ್ಧನಗೌಡ ಚೌದ್ರಿ, ಕಾಶಿನಾಥ ಸಜ್ಜನ, ಸಿದ್ದು ಕರಡಿ, ಶಫೀಕ್ ಮುರಾಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.