ಕೊಪ್ಪಳ: ಅನೆಗೊಂದಿಯ ತುಂಗಭದ್ರಾ ನದಿಯ ತಟದಲ್ಲಿರುವ ನವಬೃಂದಾವನ ನಡುಗಡ್ಡೆಯಲ್ಲಿವ್ಯಾಸರಾಜರ ಬೃಂದಾವನವನ್ನು ದುಷ್ಕರ್ಮಿಗಳು ಬುಧವಾರ ರಾತ್ರಿ ಧ್ವಂಸಗೊಳಿಸಿದ್ದಾರೆ. ನಡುಗಡ್ಡೆಯಲ್ಲಿ ಮಾಧ್ವ ಪರಂಪರೆ ಭಕ್ತಿಯಿಂದ ಆರಾಧಿಸುವ ಒಟ್ಟು ಒಂಭತ್ತು ಯತಿಗಳ ಬೃಂದಾವನಗಳಿವೆ.
ಇದನ್ನೂ ಓದಿ:ತನಿಖೆಗೆ ಉತ್ತರಾದಿಮಠದ ಸತ್ಯಾತ್ಮತೀರ್ಥರ ಆಗ್ರಹ
ಬುಧವಾರ ರಾತ್ರಿವ್ಯಾಸರಾಯರ ಬೃಂದಾವನವನ್ನುದುಷ್ಕರ್ಮಿಗಳು ಅಗೆದು, ಧ್ವಂಸಗೊಳಿಸಿದ್ದಾರೆ.ನಿಧಿಗಾಗಿ ದುಷ್ಕೃತ್ಯವೆಸಗಿರುವ ಸಾಧ್ಯತೆಗಳಿವೆ ಎಂದು ಶಂಕಿಸಲಾಗಿದೆ. ಗಂಗಾವತಿ ನಗರ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.
ನಡುಗಡ್ಡೆಯಲ್ಲಿರುವ ಕೆಲ ಬೃಂದಾವನಗಳ ಆರಾಧನೆ ನಡೆಸುವುದೂ ಸೇರಿದಂತೆ ವಿವಿಧವಿಚಾರಗಳಲ್ಲಿಮಾಧ್ವಮಠಗಳ ನಡುವೆ ಒಮ್ಮತವಿಲ್ಲ. ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.ಇದೇ ಕಾರಣಕ್ಕೆ ಪ್ರತಿವರ್ಷ ನವಬೃಂದಾವನ ಸುದ್ದಿಯಲ್ಲಿರುತ್ತಿತ್ತು.
ಒಂಭತ್ತು ಯತಿಗಳು: ನವಬೃಂದಾವನ ನಡುಗಡ್ಡೆಯಲ್ಲಿ ಪದ್ಮನಾಭತೀರ್ಥರು, ಕವೀಂದ್ರ ತೀರ್ಥರು, ವಾಗೀಶ ತೀರ್ಥರು, ರಘುವರ್ಯ ತೀರ್ಥರು, ವ್ಯಾಸರಾಯರು, ಸುಧೀಂದ್ರ ತೀರ್ಥರು, ಶ್ರೀನಿವಾಸತೀರ್ಥರು ಮತ್ತು ರಾಮತೀರ್ಥರ ಬೃಂದಾವನಗಳಿವೆ.
ಸಂಸದ, ಶಾಸಕರ ಖಂಡನೆ
ಹೊಸಪೇಟೆ ವರದಿ:ವ್ಯಾಸರಾಯರ ಬೃಂದಾವನವನ್ನುಧ್ವಂಸಗೊಳಿಸಿರುವ ದುಷ್ಕೃತ್ಯವನ್ನು ಸಂಸದ ವೈ. ದೇವೇಂದ್ರಪ್ಪ, ಶಾಸಕ ಆನಂದ್ ಸಿಂಗ್ ಖಂಡಿಸಿದ್ದಾರೆ.
‘ನಿಧಿ ಆಸೆಗಾಗಿ ಬೃಂದಾವನನ್ನುಧ್ವಂಸಗೊಳಿಸಿರುವುದು ಅಕ್ಷಮ್ಯ ಅಪರಾಧ. ಹಂಪಿ ಸುತ್ತಮುತ್ತ ಪದೇಪದೆ ಇಂತಹ ಘಟನೆಗಳು ನಡೆಯುತ್ತಿರುವುದು ದುರದೃಷ್ಟಕರ. ಹಂಪಿ ಸ್ಮಾರಕಗಳು ಹಾಗೂ ಅದರ ಸುತ್ತಮುತ್ತಲಿನ ಸ್ಥಳಗಳಿಗೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಸಂಸತ್ತಿನಲ್ಲಿ ಕೇಂದ್ರ ಸರ್ಕಾರದಗಮನ ಸೆಳೆಯುವ ಕೆಲಸ ಮಾಡುತ್ತೇನೆ’ ಎಂದು ವೈ. ದೇವೇಂದ್ರಪ್ಪ ಹೇಳಿದ್ದಾರೆ.
‘ದುಷ್ಕರ್ಮಿಗಳು ಮೂರು ಅಡಿಗಳವರೆಗೆ ನೆಲ ಅಗೆದು, ಬೃಂದಾವನ ಹಾಳು ಮಾಡಿರುವುದು ತೀವ್ರ ಖಂಡನಾರ್ಹ. ಇದನ್ನು ಕಟುವಾಗಿ ಖಂಡಿಸುತ್ತೇನೆ. ಕೃತ್ಯ ನಡೆಸಿದವರನ್ನು ಕೂಡಲೇ ಬಂಧಿಸಿ ಕ್ರಮ ಕೈಗೊಳ್ಳಬೇಕು. ಭವಿಷ್ಯದಲ್ಲಿ ಇಂತಹ ಘಟನೆಗಳು ಜರುಗದಂತೆ ಎಚ್ಚರ ವಹಿಸಬೇಕು’ ಎಂದು ಆನಂದ್ ಸಿಂಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.