ADVERTISEMENT

ನಾರಾಯಣಪುರ: ಕೃಷ್ಣಾನದಿಗೆ 1.02 ಲಕ್ಷ ಕ್ಯುಸೆಕ್ ನೀರು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2024, 15:50 IST
Last Updated 1 ಸೆಪ್ಟೆಂಬರ್ 2024, 15:50 IST
ನಾರಾಯಣಪುರದ ಬಸವಸಾಗರ ಜಲಾಶಯದಿಂದ ನೀರು ದುಮ್ಮಿಕ್ಕುವ ರಮಣೀಯ ದೃಶ್ಯ.
ನಾರಾಯಣಪುರದ ಬಸವಸಾಗರ ಜಲಾಶಯದಿಂದ ನೀರು ದುಮ್ಮಿಕ್ಕುವ ರಮಣೀಯ ದೃಶ್ಯ.   

ನಾರಾಯಣಪುರ: ಭಾನುವಾರ ಬಸವಸಾಗರ ಜಲಾಶಯದ 25 ಗೇಟ್‌ಗಳಿಂದ 1.02 ಲಕ್ಷ ಕ್ಯುಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಬಿಡಲಾಗಿದೆ.

ಪಶ್ಚಿಮಘಟ್ಟದ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆ ಆಗುತ್ತಿರುವುದರಿಂದ ಬಸವ ಸಾಗರ ಜಲಾಶಯಕ್ಕೆ ನಿರಂತರವಾಗಿ ನೀರು ಹರಿದು ಬರುತ್ತಿದ್ದು ಒಳಹರಿವನ್ನು ಗಮನಿಸಿ ಕೃಷ್ಣಾನದಿಗೆ ನೀರುಬಿಡಲಾಗುತ್ತದೆ.

ಭಾನುವಾರ ಆಲಮಟ್ಟಿಯ ಲಾಲ್ ಬಹುದ್ದೂರ ಶಾಸ್ತ್ರಿ ಜಲಾಶಯದಿಂದ ಬಸವಸಾಗರ ಜಲಾಶಯಕ್ಕೆ 1.30 ಲಕ್ಷ ಕ್ಯುಸೆಕ್ ನೀರುಬರುತ್ತಿದ್ದು ನಾರಾಯಣಪುರ ಜಲಾಶಯದ 25 ಗೇಟಗಳಿಂದ 1.02 ಲಕ್ಷ ಕ್ಯುಸೆಕ್ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ ಎಂದು ಕೆಬಿಜೆಎನ್ಎಲ್ ಮೂಲಗಳು ತಿಳಿಸಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.