ಶಹಾಪುರ: ತಾಲ್ಲೂಕಿನ ದೋರನಹಳ್ಳಿಯ ಮಲ್ಲಿಕಾರ್ಜುನ ಗುಡಿಯ ಪ್ರಾಂಗಣದಲ್ಲಿ ಹೂತು ಹೋಗಿದ್ದ ಕೆಂಪು ಗ್ರ್ಯಾನೈಟ್ ಕಲ್ಲಿನ ಮೂರು ಅಡಿ ಅಗಲ ಮತ್ತು ನಾಲ್ಕು ಅಡಿ ಉದ್ದದ ಕ್ರಿ.ಶ. 11ನೇ ಶತಮಾನದ ಹಳೆಗನ್ನಡ ಭಾಷೆ ಹಾಗೂ ಲಿಪಿಯಲ್ಲಿರುವ ಕನ್ನಡ ಶಿಲಾ ಶಾಸನವೊಂದನ್ನು ಈಚೆಗೆ ಶಿಲಾ ಶಾಸನಗಳ ಸಂಶೋಧಕ ಡಾ.ಎಂ.ಎಸ್ ಶಿರವಾಳ ಶೋಧಿಸಿದ್ದಾರೆ.
‘ದೋರನಹಳ್ಳಿಯ ರಾಮೇಶ್ವರ ದೇವರಿಗೆ ಚಿತ್ರ ಭಾನು ಸಂವತ್ಸರದ ವೈಶಾಖ ಬಹುಳದ ಅಮಾವಾಸ್ಯೆಯ ಗ್ರಹಣದಂದು ಅಧಿಕಾರಿ ಸಹೋದರ ರಿಬ್ಬರು ರಾಮೇಶ್ವರ ದೇವಸ್ಥಾನದ ಪಾರುಪತ್ಯಗಾರರಿಗೆ ಕೆಲವೊಂದು ದತ್ತಿಗಳನ್ನು ಶಿವ ಪೂಜೆಯ ಹೆಸರಿನಲ್ಲಿ ಕೊಟ್ಟಿರುವುದನ್ನು ಶಾಶ್ವತಗೊಳಿಸಲು ಈ ಶಿಲಾಶಾಸನವನ್ನು ಹಾಕಿಸಿದ ವಿಷಯವನ್ನು ಈ ಶಾಸನ ತಿಳಿಸುತ್ತದೆ’ ಎಂದು ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.