ಸುರಪುರ: ಕಳೆದ 4 ದಿನಗಳಿಂದ ಸುರಿತ ನಿರಂತರ ಮಳೆಗೆ ತಾಲ್ಲೂಕಿನ ವಿವಿಧೆಡೆ 32 ಮನೆಗಳು ಭಾಗಶಃ ಕುಸಿದಿವೆ. ರುಕ್ಮಾಪುರ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಸಿದ ಮನೆಗಳ ಸಂಖ್ಯೆ ಹೆಚ್ಚಿದೆ.
ತಹಶೀಲ್ದಾರ್ ಕಚೇರಿ ಸಿಬ್ಬಂದಿ, ಆಯಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು ಪರಿಶೀಲಿಸಿ ವರದಿ ಸಲ್ಲಿಸಿದ್ದಾರೆ.
ಒಟ್ಟಾರೆ ಸುರಪುರ ವಲಯದಲ್ಲಿ 53 ಮಿ.ಮೀ ಮಳೆ ಬಿದ್ದಿದೆ. ಶನಿವಾರ ಮಳೆ ಬಿಡುವು ನೀಡಿದೆ. ಮಳೆಯಿಂದ ಹೈರಾಣಾಗಿದ್ದ ಜನರು ನಿಟ್ಟುಸಿರು ಬಿಟ್ಟರು. ವ್ಯಾಪಾರ, ವಹಿವಾಟು ಎಂದಿನಂತೆ ನಡೆಯಿತು.
‘ಮಳೆಗಾಗಿ ಕಾಯುತ್ತಿದ್ದ ರೈತ ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದಾನೆ. ಎರಡು ಮೂರು ದಿನದ ನಂತರ ಭೂಮಿ ಒಣಗುತ್ತದೆ. ಆಗ ಬಿತ್ತನೆ ಚಟುವಟಿಕೆ ಆರಂಭವಾಗುತ್ತದೆ. ತೊಗರಿ, ಸಜ್ಜೆ, ಹತ್ತಿ ಬಿತ್ತಬಹುದು. ನವಣೆ ಬಿತ್ತಲು ಇದು ಸೂಕ್ತ ಸಮಯ’ ಎಂದು ಕೃಷಿ ಅಧಿಕಾರಿ ಸುರೇಶ ಪಾಡಮುಖಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.