ನಾರಾಯಣಪುರ: ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಒಳಹರಿವು ತಗಿದ್ದರಿಂದ ಬಸವಸಾಗರದ ಎಲ್ಲಾ ಕ್ರಸ್ಟ್‌ಗೇಟ್‌ಗಳನ್ನು ಬಂದ್ ಮಾಡಿ ಜಲಾಶಯಕ್ಕೆ ಹೊಂದಿಕೊಂಡಿರುವ ಖಾಸಗಿ ಜಲವಿದ್ಯುತ್ ಸ್ಥಾವರದಿಂದ ಅಂದಾಜು 6 ಸಾವಿರ ಕ್ಯುಸೆಕ್‌ನಷ್ಟು ನೀರನ್ನು ಕೃಷ್ಣಾನದಿಗೆ ಹರಿಬಿಡಲಾಗುತ್ತಿದೆ.
ಮಳೆ ತಗ್ಗಿದ್ದರಿಂದ ಭಾನುವಾರ ಬಸವಸಾಗರಕ್ಕೆ ಆಲಮಟ್ಟಿಯ ಶಾಸ್ತ್ರೀ ಜಲಾಶಯದಿಂದ ಅಂದಾಜು 20 ಸಾವಿರ ಕ್ಯುಸೆಕ್ ನೀರು ಬಿಡಗಡೆ ಮಾಡಲಾಗಿದ್ದರಿಂದ, ಜಲಾಶಯದ ಗರಿಷ್ಠ ಸಂಗ್ರಹ ಮಟ್ಟವನ್ನು ಗಮನಿಸಿ ಹೆಚ್ಚುವರಿ ನೀರನ್ನು ನೀರಾವರಿ ಕಾಲುವೆಗಳಿಗೆ, ಖಾಸಗಿ ಜಲವಿದ್ಯುತ್ ಸ್ಥಾವರದ ಮೂಲಕ ಕೃಷ್ಣಾ ನದಿಗೆ ನೀರು ಹರಿಸಲಾಗುತ್ತಿದೆ.
ಸದ್ಯ ಜಲಾಶಯದ ಗರಿಷ್ಠ ಎತ್ತರದ 492.25 ಮೀ. ಭಾನುವಾರ 492.19 ಮೀಟರ್‌ಗೆ ನೀರಿದ್ದು 33.03 ಟಿಎಂಸಿ ಅಡಿಗಳಷ್ಟು ನೀರು ಸಂಗ್ರಹಗೊಂಡಿದೆ. ಒಂದೊಮ್ಮೆ ಜಲಾಶಯಕ್ಕೆ ಒಳಹರಿವು ತಗ್ಗಿದರೆ ನದಿಗೆ ನೀರು ಹರಿಸುವುದನ್ನು ಕಡಿಮೆಗೊಳಿಸಲಾಗುತ್ತದೆ ಎಂದು ಅಣೆಕಟ್ಟು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.