ADVERTISEMENT

‘ಉತ್ತಮ ಸಾಹಿತ್ಯ ರಚನೆಗೆ ಮುಂದಾಗಿ’

​ಪ್ರಜಾವಾಣಿ ವಾರ್ತೆ
Published 25 ಮೇ 2024, 16:12 IST
Last Updated 25 ಮೇ 2024, 16:12 IST
ಶಹಾಪುರ ತಾಲ್ಲೂಕಿನ ಇಬ್ರಾಹಿಂಪೂರ ಗ್ರಾಮದ ಸಾಯಿ ಮಂದಿರದಲ್ಲಿ ಭಾನುವಾರ ಕಾವ್ಯ ಕಥಾ ಕಮ್ಮಟ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು
ಶಹಾಪುರ ತಾಲ್ಲೂಕಿನ ಇಬ್ರಾಹಿಂಪೂರ ಗ್ರಾಮದ ಸಾಯಿ ಮಂದಿರದಲ್ಲಿ ಭಾನುವಾರ ಕಾವ್ಯ ಕಥಾ ಕಮ್ಮಟ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು   

ಪ್ರಜಾವಾಣಿ ವಾರ್ತೆ

ಶಹಾಪುರ: ಯುವ ಸಮುದಾಯ ಇಂದಿನ ಸಮಾಜದ ಅಂಕುಡೊಂಕುಗಳನ್ನು ನಿರ್ಭೀತಿಯಿಂದ ಅಕ್ಷರದ ರೂಪದಲ್ಲಿ ಬರೆಯಲು ಯತ್ನಿಸಬೇಕು. ಸಾಮಾಜಿಕ ಸಮಸ್ಯೆಗಳಿಗೆ ಉತ್ತರ ನೀಡಬೇಕು. ಉತ್ತಮ ಸಾಹಿತ್ಯದಿಂದ ಸಮಾಜದಲ್ಲಿ ಏನೆಲ್ಲ ಬದಲಾವಣೆ ತರಲು ಸಾಧ್ಯ ಎಂಬುದನ್ನು ಪ್ರಚುರ ಪಡಿಸಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ತಿಳಿಸಿದರು.

ತಾಲ್ಲೂಕಿನ ಇಬ್ರಾಹಿಂಪೂರ ಗ್ರಾಮದ ಸಾಯಿ ಮಂದಿರದಲ್ಲಿ ಭಾನುವಾರ ಕಸಾಪ ಶಹಾಪುರ ಘಟಕ ಹಾಗೂ ಬುದ್ದ, ಬಸವ, ಅಂಬೇಡ್ಕರ ಜಯಂತ್ಯುತ್ಸವ ಅಂಗವಾಗಿ ಯುವ ಬರಹಗಾರರಿಗಾಗಿ ಕಾವ್ಯ ಕಥಾ ಕಮ್ಮಟ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ADVERTISEMENT

ವಿಮರ್ಶಕ ವಿಕ್ರಮ ವಿಸಾಜೆ ಮಾತನಾಡಿ, ಇಂದಿನ ಕಾವ್ಯ ಸಮಾಜದ ಸಂವೇದನೆಗಳಿಗೆ ಸ್ಪಂದಿಸುವ ಕಾವ್ಯ ರಚನೆಯಾಗಬೇಕು. ಯುವ ಸಾಹಿತಿಗಳು ನಿರಂತರ ಅಧ್ಯಯನಶೀಲರಾಗಬೇಕು. ಓದು ನಮ್ಮ ವ್ಯಕ್ತಿತ್ವ ಬದಲಾಯಿಸುತ್ತದೆ ಎಂದರು.

ಸಾಹಿತಿ ಅರುಣ ಜೋಳದ ಕೂಡ್ಲಿಗಿ ಮಾತನಾಡಿ, ಕಾವ್ಯ ಪರಂಪರೆಯನ್ನು, ಜೀವಂತವಾಗಿ ಸೃಜನನಾತ್ಮಕ ಕಾವ್ಯ ರಚನೆಗೆ ಮಾರ್ಗದರ್ಶನ ನೀಡಿದರು.

ಶ್ರೀಸಾಯಿ ಮಂದಿರದ ಸಂಸ್ಥಾಪಕ ಮಹಾರಾಜ ದಿಗ್ಗಿ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ರವೀಂದ್ರನಾಥ ಹೊಸಮನಿ, ಸಿದ್ದಲಿಂಗಪ್ಪ ಆನೆಗುಂದಿ, ದೇವೇಂದ್ರ ಹೆಗ್ಗಡೆ, ಗೋವಿಂದರಾಜ ಆಲ್ದಾಳ,ಗಾಳೆಪ್ಪ ಪೂಜಾರಿ, ಮಲ್ಲಣ್ಣ ಹೊಸಮನಿ, ಶರಣಬಸವ, ಮಲ್ಲಣ್ಣಗೌಡ ಪಾಟೀಲ, ಅಂಬಲಪ್ಪ ಸೈದಾಪುರ, ಅಶೋಕ ಚೌದರಿ, ಶಕುಂತಲಾ ಹಡಗಲಿ, ಸಾಯಿಬಣ್ಣ ಮುಡಬೂಳ, ಶ್ರೀಶೈಲ ನಾಗನಟಗಿ,ಸುರೇಶ ಅರುಣಿ, ಮಂಜುಳಾ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.