ಯಾದಗಿರಿ: ನಗರದ ಹೊಸಳ್ಳಿ ಕ್ರಾಸ್ ಹತ್ತಿರದ ವಿಠ್ಠಲ ಕೃಷ್ಣ ಮಂದಿರದಲ್ಲಿ ಅಖಿಲ ಭಾರತ ಶುಕ್ಲ ಯಜುರ್ವೇದ ಕಣ್ವ ಪರಿಷತ್ ಜಿಲ್ಲಾ ಘಟಕ, ಯೋಗೀಶ್ವರ ಯಾಜ್ಞವಲ್ಕ್ಯರ ಯುವ ವೇದಿಕೆ ಸಂಯುಕ್ತಾಶ್ರಯದಲ್ಲಿ ಯೋಗೀಶ್ವರ ಯಾಜ್ಞವಲ್ಕ್ಯ ಗುರುಗಳ ಆರಾಧನಾ ಮಹೋತ್ಸವ ಅದ್ದೂರಿಯಾಗಿ ಜರುಗಿತು.
ಭಾನುವಾರ ಬೆಳಿಗ್ಗೆಯಿಂದ ಆರಂಭಗೊಂಡ ಕಾರ್ಯಕ್ರಮಗಳಲ್ಲಿ ಯೋಗೀಶ್ವರ ಯಾಜ್ಞವಲ್ಕ್ಯ ಗುರುಗಳ ಅಷ್ಟೋತ್ತರ, ವಿಷ್ಣು ಸಹಸ್ರನಾಮ ಪಾರಾಯಣ ಪಂ.ನರಸಿಂಹಾಚಾರ್ ಪುರಾಣಿಕ ಅವರ ನೇತೃತ್ವದಲ್ಲಿ ಜರುಗಿತು.
ನಂತರ ಗುರುಗಳಿಗೆ ಪಂಚಾಮೃತ ಅಭಿಷೇಕ, ಅರ್ಚನೆ, ಸತ್ಯನಾರಾಯಣ ಪೂಜೆ, ಭಜನೆ ನಂತರ ಪಲ್ಲಕ್ಕಿ ಉತ್ಸವ, ಮಹಾ ಮಂಗಳಾರತಿ ನಂತರ ತೀರ್ಥ ಪ್ರಸಾದ ಜರುಗಿತು.
ಈ ಸಂದರ್ಭದಲ್ಲಿ ವಿಪ್ರ ಸಮಾಜದ ಪ್ರಮುಖರಾದ ಬಿಂದುರಾವ ಕುಲಕರ್ಣಿ, ಬಾಪುರಾವ ಮುಕಿಹಾಳ, ರಾಘವೇಂದ್ರರಾವ ಮುಂಡರಗಿ, ನರೇಂದ್ರ ಜೋಶಿ, ದಿನೇಶ ವ್ಹಿ.ಸಿ, ಸತೀಶ ಕುಲಕರ್ಣಿ, ವೆಂಕಟೇಶ, ಶಂಕರನಾರಾಯಣ ಪಸ್ಪುಲ್, ಗುರುರಾಜ್ ದೇಸಾಯಿ, ಪ್ರಶಾಂತ ದೇಶಮುಖ, ಗೋಪಾಲ ಬುರ್ಲಿ, ಸುಧಾಕರ ಕುಲಕರ್ಣಿ, ವಿಠ್ಠಲ ಆಚಾರ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.