ADVERTISEMENT

ಆಷಾಡ ಏಕಾದಶಿ; ವೇದ, ಉಪನಿಷತ್ತುಗಳಿಂದ ಮೋಕ್ಷ ಪ್ರಾಪ್ತಿ

ವಿವಿಧೆಡೆ ಆಷಾಡ ಏಕಾದಶಿ; ವಿಶೇಷ ಪೂಜೆ, ಹೋಮ ಹವನ

​ಪ್ರಜಾವಾಣಿ ವಾರ್ತೆ
Published 11 ಜುಲೈ 2022, 2:18 IST
Last Updated 11 ಜುಲೈ 2022, 2:18 IST
ಯಾದಗಿರಿ ನಗರದ ಪರಿಮಳ ಮಂಟಪದಲ್ಲಿ ಭಾನುವಾರ ಶ್ರೀಮದ್ಭಾಗವತ ಪ್ರವಚನ ಕಾರ್ಯಕ್ರಮ ಜರುಗಿತು
ಯಾದಗಿರಿ ನಗರದ ಪರಿಮಳ ಮಂಟಪದಲ್ಲಿ ಭಾನುವಾರ ಶ್ರೀಮದ್ಭಾಗವತ ಪ್ರವಚನ ಕಾರ್ಯಕ್ರಮ ಜರುಗಿತು   

ಯಾದಗಿರಿ: ‘ಮೋಕ್ಷಕ್ಕೆ ಕೇವಲ ಪೂಜೆಯಿಂದ ದೇವರ ಅನುಗ್ರಹ ಸಿಗದು, ಅದರ ಜತೆಗೆ ಜ್ಞಾನವೂ ಅವಶ್ಯಕವಾಗಿದೆ.

ಆಧ್ಯಾತ್ಮ ಮತ್ತು ಭಗವಂತನ ಕುರಿತ ಜ್ಞಾನವು ವೇದ, ಉಪನಿಷತ್ತುಗಳಿಂದ ಸಿಗುತ್ತದೆ. ಆದ್ದರಿಂದ ವೇದೋಪನಿಷತ್ತುಗಳ ಮಾರ್ಗದಲ್ಲಿ ಸಾಗಿದರೆ ಮೋಕ್ಷ ಪ್ರಾಪ್ತಿಯಾಗಲಿದೆ’ ಎಂದು ಪುರಾಣಿಕ ಪಂಡಿತ ನರಸಿಂಹಾಚಾರ
ಅಭಿಪ್ರಾಯಪಟ್ಟರು.

ನಗರದ ರಾಘವೇಂದ್ರಸ್ವಾಮಿ ಮಠದಲ್ಲಿ ಭಾನುವಾರ ಆಷಾಡ ಏಕಾದಶಿ ಅಂಗವಾಗಿ ವಿಶ್ವ ಮದ್ವ ಮಹಾಪರಿಷತ್ತು ವತಿಯಿಂದ ಆಯೋಜಿಸಿದ್ದ 'ವರ್ಷದ ಪ್ರಥಮ ಏಕಾದಶಿಯ ಪ್ರವಚನ' ಕಾರ್ಯಕ್ರಮದಲ್ಲಿ ಪ್ರವಚನ ನೀಡಿದ ಅವರು, ಚಾತುರ್ಮಾಸ್ತದಲ್ಲಿ ಆಶಾಡ ಎಕಾದಶಿಯು ಅತ್ಯಂತ ಮಹತ್ವದ್ದು, ಅದಕ್ಕೆ ಸಮಾನವಾದ ಮತ್ತೊಂದು ದಿನವಿಲ್ಲ
ಎಂದರು.

ADVERTISEMENT

ಏಕಾದಶಿಯನ್ನು ಹರಿದಿನ ಎಂದು ಕರೆಯಲಾಗುತ್ತದೆ. ಅಂದು ಭಗವಂತನ ಕೀರ್ತನೆ, ಆಧ್ಯಾತ್ಮ ಚಿಂತನೆ, ಭಾಗವತ ಶ್ರವಣದಿಂದ ಎಲ್ಲಾ ಪಾಪಗಳು ಕಳೆಯುತ್ತವೆ. ಆದ್ದರಿಂದ ಇಂದು ನಮ್ಮ ದೈನಂದಿನ ಕಾರ್ಯಗಳ ಜತೆ ಆಧ್ಯಾತ್ಮ ಚಿಂತನೆ ಹಾಗೂ ಹರಿನಾಮ ಪಾರಾಯಣವನ್ನು ಮಾಡಿದರೆ ಚೆನ್ನ. ಭಗವಾನ ಕೃಷ್ಣರಲ್ಲಿ ಪ್ರಾರ್ಥನೆ ಮಾಡಿದರೆ ನಮಗೆ ಶುಭಕಾರಕವಾಗುತ್ತದೆ ಎಂದು ಸಲಹೆ ನೀಡಿದರು.

ಪಂಡಿತ ರಾಗವೇಂದ್ರ ಜೋಶಿ ಸೇರಿದಂತೆ ವವಿಧ ಗ್ರಾಮಗಳ ವಿಪ್ರ ಸಮಾಜದ ಮಹಿಳೆಯರು, ಯುವಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.