ADVERTISEMENT

ನೀರು ಹರಿಬಿಡುವ ಸಾಧ್ಯತೆ: ನದಿ ಪಾತ್ರದಲ್ಲಿ ಎಚ್ಚರ ವಹಿಸಿ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2024, 16:27 IST
Last Updated 2 ಸೆಪ್ಟೆಂಬರ್ 2024, 16:27 IST

ಯಾದಗಿರಿ: ಜಿಲ್ಲೆಯ ಹತ್ತಿಕುಣಿ ಜಲಾಶಯ ಮತ್ತು ಸೌದಾಗರ ಆಣೆಕಟ್ಟೆಗೆ ಸತತ ಮಳೆಯಿಂದ ಒಳಹರಿವು ನಿರಂತರ ಹೆಚ್ಚಳವಾಗುತ್ತಿದ್ದು, ಜಲಾಶಯ ಮಟ್ಟ ಭರ್ತಿಯಾದ ನಂತರ ಭೀಮಾ ನದಿಗೆ ನೀರು ಹರಿ ಬಿಡಲಾಗುವುದು ಎಂದು ಕರ್ನಾಟಕ ನೀರಾವರಿ ನಿಗಮ ನಿಯಮಿತದ ಎಇಇ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಒಳಹರಿವು ಹೆಚ್ಚಿದ್ದರಿಂದ ನದಿಗೆ ನೀರು ಹರಿಬಿಡುವ ಕಾರಣ ಹತ್ತಿಕುಣಿ ಮತ್ತು ಸೌದಾಗರ ಜಲಾಶಯ ವ್ಯಾಪ್ತಿಯ ನದಿ ಪಾತ್ರದ ಸಾರ್ವಜನಿಕರು, ರೈತರು ತಮ್ಮ ಜಾನುವಾರುಗಳನ್ನು ಹಳ್ಳಕ್ಕೆ ಇಳಿಸದಂತೆ ಮತ್ತು ಮೀನುಗಾರಿಕೆ ನಡೆಸದಂತೆ ಸೂಚನೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT