ಸುರಪುರ: ಸಾರಿಗೆ ಬಸ್‍ಗಳ ಸೇವೆಯನ್ನು ಏಕಾಏಕಿ ಸ್ಥಗಿತಗೊಳಿಸಿದ್ದನ್ನು ಖಂಡಿಸಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಗಾಂಧಿ ವೃತ್ತದಲ್ಲಿ ಮಂಗಳವಾರ ದಿಢೀರ್ ಪ್ರತಿಭಟನೆ ನಡೆಸಿದರು.
ಕಾಲೇಜು ಮುಗಿಸಿಕೊಂಡು ಮರಳಿ ತಮ್ಮ ಹಳ್ಳಿಗೆ ಹೋಗಲು ಬಸ್ ನಿಲ್ದಾಣಕ್ಕೆ ವಿದ್ಯಾರ್ಥಿಗಳು ಬಂದರು. ಆಗ, ನಿಲ್ದಾಣದಲ್ಲಿ ಯಾವುದೇ ಒಂದೇ ಒಂದು ಬಸ್ ಸಹ ಇರಲಿಲ್ಲ. ಸಚಿವರ ಕಾರ್ಯಕ್ರಮ ಇದ್ದ ಕಾರಣ, ಕೆಲ ಗಂಟೆಗಳ ಕಾಲ ಬಸ್ ಸಂಚಾರ ನಿಲ್ಲಿಸಲಾಗಿತ್ತು. ವೇಗದೂತ ಬಸ್‍ಗಳು ಬೈಪಾಸ್ ಮಾರ್ಗವಾಗಿ ಸಂಚರಿಸಿದವು.
ಪೊಲೀಸರು ಎಷ್ಟೇ ಯತ್ನಿಸಿದರೂ ವಿದ್ಯಾರ್ಥಿಗಳು ಜಗ್ಗಲಿಲ್ಲ. ಸ್ಥಳಕ್ಕಾಗಮಿಸಿದ ಡಿವೈಎಸ್‍ಪಿ ಡಾ. ದೇವರಾಜ್ ಅವರು ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದರು. ಕೆಲ ಕಾಲ ವಿದ್ಯಾರ್ಥಿಗಳು ವಾಗ್ವಾದ ನಡೆಸಿದರು.
ಬಸ್ ಘಟಕದ ವ್ಯವಸ್ಥಾಪಕ ಜತೆಗೆ ಮಾತನಾಡಿ, ಬಸ್‍ಗಳನ್ನು ನಿಲ್ದಾಣಕ್ಕೆ ತರಿಸಿ ವಿದ್ಯಾರ್ಥಿಗಳನ್ನು ಅವರ ಊರುಗಳಿಗೆ ಕಳಿಸಿಕೊಡುವ ವ್ಯವಸ್ಥೆ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.