ADVERTISEMENT

ಪಪ್ಪಾಯಿ ಹಣ್ಣು ಖರೀದಿಸುವ ಭರವಸೆ ನೀಡಿದ ನಾಯ್ಕಲ್‌

ಬಿರುಗಾಳಿ ಸಹಿತ ಸುರಿದ ಮಳೆಗೆ ಧರೆಗೆ ಉರುಳಿದ ತೋಟಕ್ಕೆ ಭೆಟಿ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2020, 15:45 IST
Last Updated 22 ಏಪ್ರಿಲ್ 2020, 15:45 IST
ವಡಗೇರಾ ತಾಲ್ಲೂಕಿನ ಕುರಕುಂದ ಗ್ರಾಮದ ರೈತ ಬಸವರಾಜಪ್ಪಗೆ ಸೇರಿದ ಪಪ್ಪಾಯಿ ತೋಟ ಬಿರುಗಾಳಿ ಸಹಿತ ಮಳೆಗೆ ಹಾನಿಯಾಗಿದ್ದು, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಶರಣಭೂಪಾಲರೆಡ್ಡಿ ನಾಯ್ಕಲ್‌ ಭೇಟಿ ನೀಡಿ ರೈತನಿಗೆ ಧೈರ್ಯ ತುಂಬಿದರು
ವಡಗೇರಾ ತಾಲ್ಲೂಕಿನ ಕುರಕುಂದ ಗ್ರಾಮದ ರೈತ ಬಸವರಾಜಪ್ಪಗೆ ಸೇರಿದ ಪಪ್ಪಾಯಿ ತೋಟ ಬಿರುಗಾಳಿ ಸಹಿತ ಮಳೆಗೆ ಹಾನಿಯಾಗಿದ್ದು, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಶರಣಭೂಪಾಲರೆಡ್ಡಿ ನಾಯ್ಕಲ್‌ ಭೇಟಿ ನೀಡಿ ರೈತನಿಗೆ ಧೈರ್ಯ ತುಂಬಿದರು   

ಯಾದಗಿರಿ: ಕಟಾವು ಹಂತಕ್ಕೆ ಬಂದಿದ್ದ 5 ಎಕರೆ ಪಪ್ಪಾಯಿ ಬೆಳೆ ಸೋಮವಾರ ರಾತ್ರಿ ಬಿರುಗಾಳಿ ಸಹಿತ ಸುರಿದ ಮಳೆಗೆ ಧರೆಗೆ ಉರುಳಿದ್ದು, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಶರಣಭೂಪಾಲರೆಡ್ಡಿ ನಾಯ್ಕಲ್‌ ತೋಟಕ್ಕೆ ಭೇಟಿ ನೀಡಿ ಧೈರ್ಯ ತುಂಬಿದರು.

ವಡಗೇರಾ ತಾಲ್ಲೂಕಿನ ಕುರಕುಂದ ಗ್ರಾಮದ ರೈತ ಬಸವರಾಜಪ್ಪ ಹತ್ತುಲಕ್ಷ ಸಾಲ ಮಾಡಿ ಪಪ್ಪಾಯಿ ಬೆಳೆದಿದ್ದರು. ಆದರೆ, ಆಲಿಕಲ್ಲು ಸಹಿತ ಸುರಿದ ಮಳೆ ಹಾಗೂ ಬಿರುಗಾಳಿಗೆ ತೋಟಗಾರಿಕೆ ಬೆಳೆ ಸಂಪೂರ್ಣ ಹಾಳಾಗಿ, ರೈತರ ಆಸೆಗೆ ತಣ್ಣೀರು ಎರಚಿದಂತಾಗಿದೆ.

ಈ ವೇಳೆ ಮಾತನಾಡಿದ ಡಾ.ಶರಣಭೂಪಾಲರೆಡ್ಡಿ ನಾಯ್ಕಲ್‌, ‘ತೋಟಗಾರಿಕೆ ಇಲಾಖೆ ವತಿಯಿಂದ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ ಶೀಘ್ರದಲ್ಲಿ ಪರಿಹಾರ ಒದಗಿಸಲಾಗುವುದು’ ಎಂದರು.

‘ವೈಯಕ್ತಿಕವಾಗಿ ಮತ್ತು ಪಕ್ಷದ ಮುಖಂಡರ ಪರವಾಗಿಯೂ ಸ್ವತಃ ಉಳಿದ ಪಪ್ಪಾಯಿ ಹಣ್ಣುಗಳನ್ನು ಖರೀದಿ ಮಾಡುವುದಾಗಿ’ ತಿಳಿಸಿದರು.

ಈ ವೇಳೆ ಗ್ರಾಮದ ಪ್ರಮುಖರಾದ ಮಾಣಿಕರೆಡ್ಡಿ ಕುರಕುಂದಿ, ಅಂಬರೀಶ್, ರಾಜಪ್ಪ, ದೇವಪ್ಪ, ನಿಂಗಪ್ಪ, ಕತಾಲ್, ಸದ್ದಾಂ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.