ADVERTISEMENT

ಎಂಜಿನಿಯರಿಂಗ್: 16 ವಿದ್ಯಾರ್ಥಿಗಳಿಗೆ ಉದ್ಯೋಗ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2024, 14:21 IST
Last Updated 8 ನವೆಂಬರ್ 2024, 14:21 IST
ಸುರಪುರದ ವೀರಪ್ಪ ನಿಷ್ಠಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಶುಕ್ರವಾರ ಉದ್ಯೋಗ ಪಡೆದುಕೊಂಡರು
ಸುರಪುರದ ವೀರಪ್ಪ ನಿಷ್ಠಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಶುಕ್ರವಾರ ಉದ್ಯೋಗ ಪಡೆದುಕೊಂಡರು   

ಸುರಪುರ: ‘ರಾಜ್ಯದಲ್ಲಿ 5 ಸಾವಿರಕ್ಕೂ ಹೆಚ್ಚು ಕಂಪನಿಗಳಿವೆ. ಎಂಜಿನಿಯರಿಂಗ್ ಪದವಿ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಖಂಡಿತ ಉದ್ಯೋಗ ದೊರಕುತ್ತದೆ’ ಎಂದು ಕ್ಯೂಸ್ಪೈಡರ್ ಕಂಪನಿಯ ಸಿಇo ಗಿರೀಶ ರಾಮಣ್ಣ ಹೇಳಿದರು.

ನಗರದ ವೀರಪ್ಪ ನಿಷ್ಠಿ ಎಂಜನಿಯರಿಂಗ್ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕ್ಯಾಂಪಸ್ ಸಂದರ್ಶನದಲ್ಲಿ ಭಾಗವಹಿಸಿದ್ದ 44 ವಿದ್ಯಾರ್ಥಿಗಳ ಪೈಕಿ 16 ಜನರನ್ನು ತಮ್ಮ ಕಂಪನಿಗೆ ಆಯ್ಕೆ ಮಾಡಿ ಅವರು ಮಾತನಾಡಿದರು.

ಕ್ಯೂಸ್ಪೈಡರ್ ಕಂಪನಿಯ ಸ್ಟಾಕ್ ಅಭಿವೃದ್ಧಿ, ಫ್ರಂಟ್ ಮತ್ತು ಬ್ಯಾಂಕ್ ಎಂಡ್ ಡೆವೆಲಪರ್, ಡೇಟಾ ಅನಾಲಿಸ್ಟ್, ಮ್ಯಾನುವೆಲ್ ಟೆಸ್ಟಿಂಗ್, ಅಟೋಮೆಟಿಕ್ ಟೆಸ್ಟಿಂಗ್ ಇತರ ಕಾರ್ಯವೈಖರಿಯ ಬಗ್ಗೆ ಮಾಹಿತಿ ನೀಡಿದರು.

ADVERTISEMENT

ಕಂಪನಿಯ ಎಚ್‍ಆರ್‌ಗಳಾದ ಜೆನ್ನಿಫರ್ ಮತ್ತು ಇಶಾ ಸಂದರ್ಶನ ಪ್ರಕ್ರಿಯೆ ನಡೆಸಿದರು. ಪ್ರಾಚಾರ್ಯ ಶರಣಬಸಪ್ಪ ಸಾಲಿ, ಪ್ಲೇಸ್‍ಮೆಂಟ್ ಅಧಿಕಾರಿ ಮಂಜುನಾಥ ಯಾಳವಾರ, ಸಾಹೇಬಗೌಡ ಪಾಟೀಲ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.