ADVERTISEMENT

ಯಾದಗಿರಿ: ನಾಗರ ಪಂಚಮಿ ಆಚರಣೆ

ಶ್ರದ್ಧಾಭಕ್ತಿಯ ಪೂಜೆ, ಮನೆಯಲ್ಲೇ ಸಂಭ್ರಮ ಪಟ್ಟ ಭಕ್ತರು

​ಪ್ರಜಾವಾಣಿ ವಾರ್ತೆ
Published 24 ಜುಲೈ 2020, 17:59 IST
Last Updated 24 ಜುಲೈ 2020, 17:59 IST
ಯಾದಗಿರಿ ನಗರದ ವಿಶ್ವಕರ್ಮ ಏಕದಂಡಗಿ ಮಠದ ಆವರಣದಲ್ಲಿರುವ ನಾಗದೇವತೆಗೆ ಹಾಲು, ನೈವೇದ್ಯ ಅರ್ಪಿಸಿದ ಮಹಿಳೆಯರು
ಯಾದಗಿರಿ ನಗರದ ವಿಶ್ವಕರ್ಮ ಏಕದಂಡಗಿ ಮಠದ ಆವರಣದಲ್ಲಿರುವ ನಾಗದೇವತೆಗೆ ಹಾಲು, ನೈವೇದ್ಯ ಅರ್ಪಿಸಿದ ಮಹಿಳೆಯರು   

ಯಾದಗಿರಿ: ಶ್ರಾವಣ ಮಾಸದ ಮೊದಲಶುಕ್ರವಾರ ನಾಗರ ಪಂಚಮಿ ಹಬ್ಬವನ್ನು ಭಕ್ತರು ಶ್ರದ್ಧಾಭಕ್ತಿಯಿಂದ ಆಚರಿಸಿದರು.

ಮಹಿಳೆಯರು ಬೆಳಗಿನ ಜಾವದಿಂದಲೇ ಪೂಜೆ, ಪುನಸ್ಕಾರಗಳಲ್ಲಿ ತೊಡಗಿಸಿಕೊಂಡಿದ್ದರು. ಕೆಲವರು ಸಮೀಪದ ದೇವಸ್ಥಾನಗಳಿಗೆ ತೆರಳಿ ಹುತ್ತಕ್ಕೆ ಹಾಲೆರೆಯುವ ಮೂಲಕ ಭಕ್ತಿ ಸಮರ್ಪಿಸಿದರು.

ನಗರದ ಲಕ್ಷ್ಮಿ ನಗರದ ಲಕ್ಷ್ಮಿ ದೇವಸ್ಥಾನ, ವಿಶ್ವಕರ್ಮ ಏಕದಂಡಗಿ ಮಠದ ಆವರಣದಲ್ಲಿರುವ ನಾಗದೇವತೆಗೆ ಮಹಿಳಾ ಭಕ್ತರು ಹಾಲು, ನೈವೇದ್ಯ ಅರ್ಪಿಸಿದರು.ಶನಿವಾರ ಬೆಲ್ಲದ ಹಾಲು ಹಬ್ಬ ಆಚರಣೆ ಮಾಡಲಾಗುತ್ತಿದೆ.

ADVERTISEMENT

ಕೊರೊನಾ ಕಾರಣದಿಂದ ನಗರದ ಪ್ರದೇಶದಲ್ಲಿ ಹಬ್ಬದ ವಾತಾವರಣ ಅಷ್ಟಾಗಿ ಇರಲಿಲ್ಲ. ಗ್ರಾಮೀಣ ಭಾಗದಲ್ಲಿಯೂ ಹಬ್ಬದ ಸಂಭ್ರಮ ಕಡಿಮೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.