ADVERTISEMENT

ಕುಸಿದ ಮೆಣಸಿನಕಾಯಿ ದರ: ಕಳೆದ ವರ್ಷಕ್ಕಿಂತ ಅರ್ಧ ದರಕ್ಕೆ ಮಾರಾಟ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2024, 6:24 IST
Last Updated 11 ಫೆಬ್ರುವರಿ 2024, 6:24 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ವಡಗೇರಾ: ತಾಲ್ಲೂಕು ವ್ಯಾಪ್ತಿಯಲ್ಲಿ ಮಳೆ ಅಭಾವ ಹಾಗೂ ಸೋಂಕುನಿಂದ ಮೆಣಸಿನಕಾಯಿಯ ಇಳುವರಿ ಕಡಿಮೆಯಾಗಿದೆ.

ಒಣ ಮೆಣಸಿನಕಾಯಿಗೆ ಬೆಂಬಲ ಬೆಲೆ ಇಲ್ಲದಿರುವುದರಿಂದ ರೈತರ ಪಾಲಿಗೆ ಒಣ ಮೆಣಸಿನಕಾಯಿ ಖಾರವಿಲ್ಲದೆ ಕಣ್ಣೀರು ತರಿಸುತ್ತಿದೆ. ಅಲ್ಲದೇ ರೈತರ ಆರ್ಥಿಕ ಹೊರೆಯನ್ನು ಹೆಚ್ಚಿಸಿದೆ.

ADVERTISEMENT

ಮೆಣಸಿನಕಾಯಿ ಬೆಳೆದ ರೈತರು ಒಂದು ಎಕರೆಗೆ ಕ್ರಿಮಿನಾಶಕ, ಕಳೆ ಹಾಗೂ ಇನ್ನಿತರ ಕೃಷಿ ಚಟುವಟಿಕೆಗಳಿಗಾಗಿ ಸಾಲ ಸೋಲ ಮಾಡಿ ಸುಮಾರು ₹80 ಸಾವಿರಕ್ಕೂ ಅಧಿಕ ಹಣ ಖರ್ಚು ಮಾಡಿದ್ದಾರೆ. ಆದರೆ, ಮೆಣಸಿನಕಾಯಿ ಬೆಲೆ ಪಾತಾಳಕ್ಕೆ ಇಳಿದಿರುವುದರಿಂದ ಅನೇಕ ರೈತರು ಮಾಡಿದ ಸಾಲ ಹೇಗೆ ತೀರಿಸಬೇಕು ಎಂಬ ಚಿಂತೆಯಲ್ಲಿದ್ದಾರೆ.

ಕಳೆದ ವರ್ಷ ಒಂದು ಕ್ವಿಂಟಲ್ ಮೆಣಸಿನಕಾಯಿ ಸುಮಾರು ₹25 ರಿಂದ 30 ಸಾವಿರವರೆಗೆ ಮಾರಾಟವಾಗಿತ್ತು. ಆದರೆ, ಈ ವರ್ಷ ಕ್ವಿಂಟಲ್‌ಗೆ ಸುಮಾರು ₹14 ರಿಂದ 18 ಸಾವಿರವರೆಗೆ ಮಾರಾಟವಾಗುತ್ತಿದೆ. ಇದರಿಂದಾಗಿ ಮೆಣಸಿನಕಾಯಿ ಬೆಳೆದ ರೈತರು ಆರ್ಥಿಕವಾಗಿ ಸಂಕಟ ಎದುರಿಸುತ್ತಿದ್ದಾರೆ. ಜೀವನ ನಿರ್ವಹಣೆಯೂ ಕಷ್ಟವಾಗಿದೆ ಎಂದು ಚಿಂತೆಗೀಡಾಗಿದ್ದಾರೆ.

ಕಳೆದ ಎರಡು ವರ್ಷಗಳ ಹಿಂದೆ ಸತತವಾಗಿ ಪ್ರವಾಹ ಬಂದು ರೈತರು ಬೆಳೆದ ಬೆಳೆಗಳು ಪ್ರವಾಹದಲ್ಲಿ ಮುಳುಗಿ ಬೆಳೆ ನಾಶವಾಗಿತ್ತು. ಈ ಬಾರಿ ಸಕಾಲದಲ್ಲಿ ಮಳೆ ಬಾರದೆ ಇರುವುದರಿಂದ ರೈತರ ಜಮೀನಿನಲ್ಲಿ ಇದ್ದ ಬೆಳೆಗಳು ಒಣಗಿ ಹೋಗಿ ಈ ವರ್ಷ ಬರಗಾಲ ಆವರಿಸಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಧ್ಯಸ್ಥಿಕೆ ವಹಿಸಿ ಮೆಣಸಿನಕಾಯಿಗೆ ಬೆಂಬಲ ಬೆಲೆ ಘೋಷಿಸಿ ರೈತರ ಹಿತ ಕಾಯಬೇಕು ಎನ್ನುವುದು ತಾಲ್ಲೂಕಿನ ರೈತರ ಆಗ್ರಹವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.