ನಾರಾಯಣಪುರ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಒಂದಾದ ಸ್ವಚ್ಛ ಭಾರತ ಅಭಿಯಾನದಲ್ಲಿ ಬಸವಸಾಗರ ಜಲಾಶಯ ಅಡಿಯಲ್ಲಿ ಬರುವ ಅಣೆಕಟ್ಟು ಪ್ರದೇಶದ ಆವರಣದಲ್ಲಿ ಕೆಬಿಜೆಎನ್ಎಲ್ ವಿವಿಧ ಹಂತದ ಕಚೇರಿಗಳ ಆವರಣ, ವಸತಿ ಗೃಹ, ಶಾಲಾ ಕಾಲೇಜು ಆವರಣ ಹಾಗೂ ಕಾಲುವೆ ಜಾಗಗಳಲ್ಲಿನ ಹೂಳ, ಮುಳ್ಳುಕಂಟಿ, ಕಸವನ್ನು ತೆರವುಗೊಳಸಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಸಾರ್ವಜನಿಕರಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಲಾಗಿದೆ’ ಎಂದು ಮುಖ್ಯ ಎಂಜಿನಿಯರ್ ಆರ್.ಮಂಜುನಾಥ ಹೇಳಿದರು.
‘ಅಭಿಯಾನದಲ್ಲಿ ಅಧಿಕಾರಿ ವರ್ಗದವರು, ಸಿಬ್ಬಂದಿ, ಗ್ರಾಮಸ್ಥರು, ಸಂಘ ಸಂಸ್ಥೆಯವರು ಸ್ವಯಂಪ್ರೇರಿತರಾಗಿ ಭಾಗಿಯಾಗಿ ಸ್ವಚ್ಛತಾ ಅಭಿಯಾನ ಯಶಸ್ವಿಗೆ ಕೈಜೋಡಿಸುವ ಮೂಲಕ ಸಹಕಾರ ನೀಡಿದ್ದಾರೆ ಅವರೆಲ್ಲರಿಗೂ ಅಭಿನಂದನೆ’ ಎಂದರು.
ಅಧೀಕ್ಷಕ ಎಂಜಿನಿಯರ್ ರಮೇಶ ಜಿ ರಾಠೋಡ, ಇಇ ಎಂ.ತಂಬಿದೊರೆ, ಅಶೋಕರೆಡ್ಡಿ ಪಾಟೀಲ, ಸುರೇಂದ್ರ ರೆಡ್ಡಿ, ಎಚ್.ರವಿಕುಮಾರ, ಟಿ.ಎ.ಅಜಿತ್ ಕುಮಾರ, ರಮೇಶ ಜಾಧವ, ಎಇಇ ಪ್ರಭಾಕರ, ಅಮರೇಗೌಡ ಬಯ್ಯಾಪೂರ, ಶಂಕರ ಹಡಲಗೇರಿ, ಶಿವರಾಜ ಪಾಟೀಲ, ರಿಜಿಸ್ಟರ್ ಆದಂಶಫೀ ಸೇರಿ ಅರಣ್ಯ ಇಲಾಖೆ, ಜಲಾಶಯ ಭದ್ರತಾ ಸಿಬ್ಬಂದಿ ಮತ್ತು ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.