ಯಾದಗಿರಿ: ಮುಖ್ಯಮಂತ್ರಿ ಕುಮಾರಸ್ವಾಮಿಯವರು ಕೆಕೆ ಎಕ್ಸ್‌ಪ್ರೆಸ್ (ಕರ್ನಾಟಕ ಎಕ್ಸ್‌ಪ್ರೆಸ್)ಮೂಲಕ ಇಂದು ಮುಂಜಾನೆ ನಗರಕ್ಕೆ ಬಂದರು. ಸದ್ಯ ಸರ್ಕೀಟ್ ಹೌಸ್ ನಲ್ಲಿ ಸಿಎಂ ವಿಶ್ರಾಂತಿ ಪಡೆಯುತ್ತಿದ್ದಾರೆ.
ಯಾದಗಿರಿ ಜಿಲ್ಲೆಯ ತಾಜಾ ಅಪ್‌ಡೇಟ್‌ಗಳಿಗೆwww.prajavani.net/yadagiriನೋಡಿ
ಬೆಳಿಗ್ಗೆ 8.30 ಕ್ಕೆ ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರ ನಿವಾಸದಲ್ಲಿ ಉಪಾಹಾರ ಸೇವಿಸಲಿದ್ದಾರೆ. 9 ಗಂಟೆ ನಂತರ ಸರ್ಕಾರಿ ಬಸ್‌ನಲ್ಲಿಯಾದಗಿರಿಯಿಂದ ಚಂಡರಕಿಗೆ ಬಸ್‌ನಲ್ಲಿ ಸಿಎಂ ತೆರಳಿದ್ದಾರೆ. ಶಾಸಕ ನಾಗನಗೌಡ ಕಂದಕೂರ ಹಾಗೂ ಅಧಿಕಾರಿಗಳು ಸಾಥ್ ನೀಡುವರು.
ಇದನ್ನೂ ಓದಿ:‘ಜನತಾ ದರ್ಶನದಲ್ಲಿ ಮನವಿ ಜತೆಗೆ ದಾಖಲೆ ಸಲ್ಲಿಸಿ’
ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆ ವರಗೆ ಜನತಾದರ್ಶನ, ನಂತರ ಶಾಲೆ ಮಕ್ಕಳಿಂದವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.ರಾತ್ರಿ 8.30ಕ್ಕೆವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಜೊತೆ ಸಿಎಂ ಭೋಜನ ಸೇವಿಸಲಿದ್ದಾರೆ. ನಂತರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸಿಎಂ ವಾಸ್ತವ್ಯ ಮಾಡಲಿದ್ದಾರೆ.
ಸಚಿವರಾದ ಬಂಡೆಪ್ಪ ಕಾಶೆಂಪೂರ, ಸಾ.ರಾ.ಮಹೇಶ್, ವೆಂಕಟರಾವ್ ನಾಡಗೌಡ, ರಾಜಶೇಖರ ಪಾಟೀಲ, ಪ್ರಿಯಾಂಕ್ ಖರ್ಗೆ ಹಾಗೂ ಇನ್ನಿತರ ನಾಯಕರ ಆಗಮಿಸಲಿದ್ದಾರೆ.
ಜನ ಪರ ಯೋಜನೆ ಜಾರಿ: ಸಿಎಂ
ನಮ್ಮ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು,ಗ್ರಾಮ ವಾಸ್ತವ್ಯ ಕಾರ್ಯಕ್ರಮಗಳ ಮೂಲಕ ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು. ನಗರಕ್ಕೆ ಬಂದಿಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ನವ ವಧುವಿನಂತೆ ಕಂಗೋಳಿಸಿದ ಚಂಡರಕಿ ಗ್ರಾಮ
ಸಿಎಂ ವಾಸ್ತವ್ಯ ಮಾಡಲಿರುವ ಶಾಲೆ ತಳಿರು ತೋರಣಗಳಿಂದ ಸಿಂಗಾರಗೊಂಡಿದೆ. ಭದ್ರತೆಗಾಗಿಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.
ಇನ್ನಷ್ಟು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.