ADVERTISEMENT

ಶ್ರೀಗಳ ಅಗಲಿಕೆ ತುಂಬಲಾರದ ನಷ್ಟ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2019, 9:42 IST
Last Updated 30 ಡಿಸೆಂಬರ್ 2019, 9:42 IST
ವಿದ್ಯಾ ವಿರಾಜ ಕಣ್ವತೀರ್ಥ ಶ್ರೀಪಾದಂಗಳು
ವಿದ್ಯಾ ವಿರಾಜ ಕಣ್ವತೀರ್ಥ ಶ್ರೀಪಾದಂಗಳು   

ಕಕ್ಕೇರಾ: ಉಡುಪಿಯ ಪೇಜಾವರ ಮಠದ ಶ್ರೀಗಳು ಕೇವಲ ತಮ್ಮ ಅನುಯಾಯಿಗಳಿಗಲ್ಲದೇ ಧಾರ್ಮಿಕ ಹಾಗೂ ಲೌಕಿಕವಾಗಿ ಭಕ್ತ ವೃಂದದಲ್ಲಿ ಇಂದಿಗೂ ಮನೆ ಮಾಡಿದ್ದಾರೆ. ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಗಳ ಅಗಲಿಕೆಯಿಂದ ನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದು ಹುಣಸಿಹೊಳೆಯ ಕಣ್ವಮಠದ ವಿದ್ಯಾವಿರಾಜ ಕಣ್ವ ತೀರ್ಥ ಶ್ರೀಪಾದಂಗಳುಅವರು ಕಂಬನಿ ಮಿಡಿದರು.

ಸಮೀಪದ ಹುಣಸಿಹೊಳೆಯ ಕಣ್ವಮಠದಲ್ಲಿ ಭಾನುವಾರ ಬೆಳಿಗ್ಗೆ ನಡೆಸಿದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶ್ರೀಗಳು, ಹುಣಸಿಹೊಳೆಯ ಕಣ್ವಮಠಕ್ಕೂ ಮತ್ತು ಉಡುಪಿಯ ಮಠಕ್ಕೂ ಅವಿನಾಭಾವ ಸಂಬಂಧವಿದೆ. ಕಳೆದ ವರ್ಷ ಶ್ರೀಮಠದಲ್ಲಿ ಜರುಗಿದ ಮಹಾಸಮಾರಾಧನೆಗೆ ಹುಣಸಿಹೊಳೆಯ ಕಣ್ವಮಠಕ್ಕೆ ಆಗಮಿಸಿದ್ದರು.

ತಪಸ್ವಿಗಳಾದ ಶ್ರೀಗಳು ಸಮಾಜದ ಒಳಿತಿಗಾಗಿ ಜನಸೇವೆ, ರಾಷ್ಟ್ರಸೇವೆ, ಲಿಂಗತಾರತಮ್ಯ ನಿವಾರಣೆ, ದಲಿತ ಕೇರಿಯಲ್ಲಿ ಪಾದಯಾತ್ರೆ ಮೂಲಕ ಚಳುವಳಿಗಾರರು, ಸಮಾಜ ಸುಧಾರಕರು ಅಖಂಡ ಭಾರತದ ಒಳಿತಿಗಾಗಿ ಸಂಪ್ರದಾಯದ ಚೌಕಟ್ಟನ್ನು ಮೀರಿ ತಪಸ್ಸು ಮಾಡಿದ ಮಹಾನ್ ತಪಸ್ವಿಯಾಗಿದ್ದರು. ಶ್ರೀಗಳು ತಮ್ಮ ಜೀವನದಲ್ಲಿ ಪರಿಪೂರ್ಣ ಯಶಸ್ಸನ್ನು ಕಂಡವರು ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.