ಹತ್ತಿಕುಣಿ (ಯರಗೋಳ): ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಬ್ಯಾಂಕ್‌ಗೆ ಶನಿವಾರ ಮಧ್ಯರಾತ್ರಿ ಕಳ್ಳರು ಕಚೇರಿ ಮುಖ್ಯ ಬಾಗಿಲಿನಲ್ಲಿ ಅಳವಡಿಸಿರುವ ಕಬ್ಬಿಣದ ಬಾಗಿಲನ್ನು ಮುರಿದು ಕನ್ನ ಹಾಕಿ ಹಣ ದೋಚಿ ಪರಾರಿಯಾಗಿರುವ ಘಟನೆ ಜರುಗಿದೆ.
ಭಾನುವಾರ ಬೆಳಿಗ್ಗೆ ಸಂಘದ ಬ್ಯಾಂಕ್ ಬಾಗಿಲು ಮುರಿದಿರುವ ವಿಷಯ ತಿಳಿದು ಸಂಘದ ಮುಖ್ಯ ಕಾರ್ಯನಿವಾರ್ಹಕ ಅಧಿಕಾರಿ ಸಂಜೀವ ಕುಮಾರ ಪುಟಗಿ ಆಗಮಿಸಿ, ನಂತರ ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದರು.
'ರೈತರಿಂದ ಸಾಲ ವಸೂಲಾತಿ ಹಾಗೂ ದಿನಾಲು ಸಣ್ಣ ವ್ಯಾಪಾರದಿಂದ ಸಂಗ್ರಹಿಸಿ ಇಟ್ಟಿದ ಅಂದಾಜು ₹3.5 ಲಕ್ಷ ಹಣ ಕಳ್ಳತನವಾಗಿರುವ ಘಟನೆ ವಿಷಯ ತಿಳಿಸಿದರು.
ಸ್ಥಳಕ್ಕೆ ಆಗಮಿಸಿದ ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ ಐ ರಾಜಕುಮಾರ ಜಾಮಗೊಂಡ ಪರಿಶೀಲನೆ ಮಾಡಿ, ಬೆರಳಚ್ಚು ತಜ್ಞರಿಗೆ, ಶ್ವಾನ ದಳಕ್ಕೆ ಮಾಹಿತಿ ನೀಡಿದರು.
ಸ್ಥಳಕ್ಕೆ ಆಗಮಿಸಿದ ತಂಡ ಬ್ಯಾಂಕ್ ಒಳಗಡೆ ಇರುವ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ 3 ಜನ ಕಳ್ಳರ ಕೈಚಳಕ ದೃಶ್ಯಗಳನ್ನು ಗಮನಿಸಿ ಪರಿಶೀಲನೆ ಮಾಡಿದರು.
ಬ್ಯಾಂಕ್ ನಲ್ಲಿ ಕಳ್ಳತನವಾಗಿದೆ ಎಂಬ ಸುದ್ದಿ ಹರಡುತ್ತಿದಂತೆ ಸಂಘದ ಅಧ್ಯಕ್ಷ ಮಹಿಪಾಲರೆಡ್ಡಿ ಪಾಟೀಲ ಹಾಗೂ ಸಂಘದ ನಿರ್ದೇಶಕರು ರೈತಾಪಿ ವರ್ಗ ಕಚೇರಿ ಮುಂಭಾಗದಲ್ಲಿ ಸೇರಿ ಚರ್ಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.