ADVERTISEMENT

ವಡಗೇರಾ | ಮೊಸಳೆ ಪ್ರತ್ಯಕ್ಷ : ಅರಣ್ಯ ಇಲಾಖೆಯ ಕೈವಶ

​ಪ್ರಜಾವಾಣಿ ವಾರ್ತೆ
Published 16 ಮೇ 2024, 13:10 IST
Last Updated 16 ಮೇ 2024, 13:10 IST
ವಡಗೇರಾ: ತಾಲ್ಲೂಕಿನ ಉಳ್ಳೆಸೂಗುರ ಸೀಮಾಂತರದ ಕುರಕುಂದಿ ಗ್ರಾಮದಿಂದ ಅನತಿ ದೂರದಲ್ಲಿ ಇರುವ ಬಾಬುಮಿಯ್ಯ ದರ್ಜಿಯವರ ಜಮೀನಲ್ಲಿ ಇರುವ ಹೊಂಡದಲ್ಲಿ ಮೊಸಳೆ ಪ್ರತ್ಯವಾಗಿರುವದು
ವಡಗೇರಾ: ತಾಲ್ಲೂಕಿನ ಉಳ್ಳೆಸೂಗುರ ಸೀಮಾಂತರದ ಕುರಕುಂದಿ ಗ್ರಾಮದಿಂದ ಅನತಿ ದೂರದಲ್ಲಿ ಇರುವ ಬಾಬುಮಿಯ್ಯ ದರ್ಜಿಯವರ ಜಮೀನಲ್ಲಿ ಇರುವ ಹೊಂಡದಲ್ಲಿ ಮೊಸಳೆ ಪ್ರತ್ಯವಾಗಿರುವದು   

ವಡಗೇರಾ: ತಾಲ್ಲೂಕಿನ ಉಳ್ಳೆಸೂಗುರ ಸೀಮಾಂತರದ ಕುರಕುಂದಿ ಗ್ರಾಮದ ಸಮೀಪದ ಬಾಬುಮಿಯ್ಯ ದರ್ಜಿಯವರ ಜಮೀನಲ್ಲಿ ಇರುವ ಹೊಂಡದಲ್ಲಿ ಬುಧುವಾರ ಮೊಸಳೆ ಪ್ರತ್ಯಕ್ಷವಾಗಿದೆ.

ನಾಲ್ಕು ವರ್ಷಗಳ ಹಿಂದೆ ಹೊಂಡದಲ್ಲಿ ಸಣ್ಣದೊಂದು ಮೊಸಳೆಯ ಮರಿ ಇತ್ತು. ಗ್ರಾಮಸ್ಥರು ಅದನ್ನು ನೋಡಿ ಮೊಸಳೆಯ ಮರಿಯಿದೆ ಎಂದು ಸುಮ್ಮನಾಗಿದ್ದರು. ಆದರೆ ಬುಧುವಾರ ಸಂಜೆ 4 ಗಂಟೆಗೆ ಗ್ರಾಮದ ರೈತರು ಹುಲ್ಲು ತರಲು ಆ ಹೊಂಡದ ಸಮೀಪ ಹೋದಾಗ ಹೊಂಡದಿಂದ ಹೊರ ಬಂದ ಮೊಸಳೆಯನ್ನು ಕಂಡು ರೈತರು, ಮರಿಯಾಗಿದ್ದ ಮೊಸಳೆ ದೊಡ್ಡದಾಗಿಬೆಳದಿದ್ದನ್ನು ಕಂಡು ಬೆಚ್ಚಿದ್ದಾರೆ.

ರೈತರು ಈ ಸುದ್ದಿಯನ್ನು ಗ್ರಾಮಸ್ಥರಿಗೆ ಮುಟ್ಟಿಸಿದಾಗ ಗ್ರಾಮಸ್ಥರೆಲ್ಲ ಸೇರಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ತಮ್ಮ ಜತೆ ಮೀನುಗಾರರನ್ನು ಕರೆದುಕೊಂಡು ಸ್ಥಳಕ್ಕೆ ಬಂದು ಮೊಸಳೆಯನ್ನು ರಾತ್ರಿ ಸುಮಾರು 8 ಗಂಟೆಯ ಸಮಯದಲ್ಲಿ ಹಿಡಿದು ಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ.

ADVERTISEMENT

ಮೊಸಳೆ ಬಹಳ ದಿನಗಳಿಂದ ಹೊಂಡದಲ್ಲಿದ್ದರೂ ಯಾವುದೇ ಪ್ರಾಣ ಹಾನಿಯನ್ನು ಮಾಡಿಲ್ಲ. ಒಂದೇ ಬಾರಿ ನಾಯಿಯ ಮೇಲೆ ದಾಳಿ ಮಾಡಿತ್ತು ಎಂದು ಕುರಕುಂದಿ ಗ್ರಾಮಸ್ಥರು ಹೇಳಿದ್ದಾರೆ.

16 ಎಚ್ ಡಬ್ಲು1 ಎ: ಮೊಸಳೆಯನ್ನು ಹಿಡಿದು ಹಗ್ಗದಿಂದ ಕಟ್ಟಿರುವದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.