ADVERTISEMENT

ಸಿಲಿಂಡರ್ ಸ್ಫೋಟ ಅವಘಡ: ಸಾವಿನ ಸಂಖ್ಯೆ 7ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2022, 5:15 IST
Last Updated 2 ಮಾರ್ಚ್ 2022, 5:15 IST
ವೀರಬಸಪ್ಪ ಮಲ್ಲಣ್ಣ ಹಳ್ಳದ
ವೀರಬಸಪ್ಪ ಮಲ್ಲಣ್ಣ ಹಳ್ಳದ   

ಶಹಾಪುರ (ಯಾದಗಿರಿ): ತಾಲ್ಲೂಕಿನ ದೋರನಹಳ್ಳಿ ಗ್ರಾಮದ ಯುಕೆಪಿ ಕ್ಯಾಂಪಿನ ಸೀಮಂತ ಕಾರ್ಯಕ್ರಮದಲ್ಲಿ ಸಿಲಿಂಡರ್ ಸ್ಫೋಟದ ಅವಘಡದಿಂದ ಬುಧವಾರ ಮತ್ತಿಬ್ಬರು ಮೃತಪಟ್ಟಿದ್ದಾರೆ.‌ ಇದರಿಂದ ಸಾವಿನ ಸಂಖ್ಯೆ 7 ಕ್ಕೆ ಏರಿಕೆಯಾಗಿದೆ.

ಭೀಮರಾಯ ಶಿವಪ್ಪ ಮರ್ಸ (78), ಮಲ್ಲಣ್ಣ ಹಳ್ಳದ (28) ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಫೆ.25 ರಂದು ಆಧ್ಯಾ (3), ಮಹಾಂತೇಶ (15 ತಿಂಗಳ‌ಮಗು), ನಿಂಗಮ್ಮ (86) ಮೃತಪಟ್ಟಿದ್ದರು. ನಂತರ ಗಂಗಮ್ಮ (45), ಶ್ವೇತಾ (6) ಮೃತಪಟ್ಟಿದ್ದಾರೆ.

ADVERTISEMENT

ಕಳೆದ ಶುಕ್ರವಾರ ದೋರನಹಳ್ಳಿಯಲ್ಲಿ ನಿವೃತ್ತ ನೌಕರ ಸಾಯಬಣ್ಣ ಹಗರಟಿಗಿ ಅವರ ಮನೆಯಲ್ಲಿ ಸೀಮಂತ ಕಾರ್ಯಕ್ರಮ ನಡೆಯುವ ವೇಳೆ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಸುಮಾರು 24 ಮಂದಿ ಗಾಯಗೊಂಡಿದ್ದರು.

ಗಾಯಾಳುಗಳಿಗೆ ದೋರನಹಳ್ಳಿ ಪ್ರಾಥಮಿಕ ಆರೋಗ್ಯ, ಶಹಾಪುರ ತಾಲ್ಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿತ್ತು. ನಂತರ ಕಲಬುರಗಿಯ ಬಸವೇಶ್ವರ, ಜಿಮ್ಸ್, ಚಿರಾಯು, ಯುನಿಟೈಡ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.