ADVERTISEMENT

ಯರಗೋಳ: ವಿವಿಧೆಡೆ ರಾಷ್ಟ್ರೀಯ ಏಕತಾ ದಿವಸ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2019, 11:36 IST
Last Updated 31 ಅಕ್ಟೋಬರ್ 2019, 11:36 IST
ಯರಗೋಳದ ಸರ್ವೋದಯ ಶಿಕ್ಷಣ ಸಂಸ್ಥೆಯಲ್ಲಿ ರಾಷ್ಟ್ರೀಯ ಏಕತಾ ದಿವಸವನ್ನು ಆಚರಿಸಲಾಯಿತು
ಯರಗೋಳದ ಸರ್ವೋದಯ ಶಿಕ್ಷಣ ಸಂಸ್ಥೆಯಲ್ಲಿ ರಾಷ್ಟ್ರೀಯ ಏಕತಾ ದಿವಸವನ್ನು ಆಚರಿಸಲಾಯಿತು   

ಯರಗೋಳ: ಇಲ್ಲಿಗೆ ಸಮೀಪದ ಬಾಚವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಏಕತಾ ದಿವಸ ಆಚರಿಸಲಾಯಿತು.

ಮುಖ್ಯಶಿಕ್ಷಕ ಸುರೇಶ್ ರಾಥೋಡ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಭಾವಚಿತ್ರಕ್ಕೆ ಪೂಜೆ ನೆರೆವೇರಿಸಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮದ ಶಿವಯೋಗಿ ಬಡಿಗೇರ ,ಮಂಜುನಾಥ ಅರ್ಜುನೋರ್ ಇತರ ಪದಾಧಿಕಾರಿಗಳು ಭಾಗವಹಿಸಿದ್ದರು. ಶಿಕ್ಷಕ ಚಂದ್ರಶೇಖರ ನಿರೂಪಿಸಿದರು. ಬಂಗಾರಪ್ಪ ವಂದಿಸಿದರು.

ADVERTISEMENT

ಅರಕೇರಾ: ಗ್ರಾಮ ಪಂಚಾಯಿತಿಯಲ್ಲಿ ರಾಷ್ಟ್ರೀಯ ಏಕತಾ ದಿವಸ ಆಚರಿಸಲಾಯಿತು.

ಪಿಡಿಒ ಉಮೇಶ್ ಚೌವ್ಹಾಣ್ ಸರ್ದಾರ್ ವಲ್ಲಭಭಾಯ್ ಪಟೇಲ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಅಧ್ಯಕ್ಷ ಪ್ರೇಮಕುಮಾರ ಚೌವ್ಹಾಣ್, ಸದಸ್ಯರಾದ ವಾಲಿ, ಲಕ್ಷ್ಮಣ, ಹನುಮಂತ ಶಿವಾಯನಮ, ಪ್ರಭುಗೌಡ ಅರಕೇರಾ, ಮಲ್ಲಣ್ಣ ಅಚ್ಚೋಲಿ, ಭೀಮಣ್ಣ ಶಾಬಾದಿ, ವಿಕ್ರಂ ಬಸವಂತಪುರ, ಬಿಲ್ ಕಲೆಕ್ಟರ್ ಮೋನೇಶ, ಹಳೆಮನೆ ಹಾಗೂ ಕೃಷ್ಣ ಇದ್ದರು.

ಬಂದಳ್ಳಿ: ಇಲ್ಲಿಯ ಬನದೇಶ್ವರ ಪ್ರಾಥಮಿಕ ಶಿಕ್ಷಣ ಸಂಸ್ಥೆಯಲ್ಲಿ ರಾಷ್ಟ್ರೀಯ ಏಕತಾ ದಿವಸದ ಅಂಗವಾಗಿ ಮುಖ್ಯಶಿಕ್ಷಕ ವಿಶ್ವನಾಥ ಪತ್ತಾರ್ ಸರ್ದಾರ್ ವಲ್ಲಭಭಾಯ್ ಪಟೇಲ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ನಾಗಶ್ರೀ ನಿರೂಪಿಸಿದರು. ಶಾಂತ ಸ್ವಾಮಿ ಸ್ವಾಗತಿಸಿದರು. ಗೀತಾ ವಂದಿಸಿದರು.

ವೆಂಕಟೇಶ ನಗರ: ಧಾಮಸಾದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಏಕತಾ ದಿವಸ ಆಚರಿಸಲಾಯಿತು.

ಸಂಸ್ಥೆಯ ಅಧ್ಯಕ್ಷ ಗೋವಿಂದ ರಾಠೋಡ ಸರ್ದಾರ್ ವಲ್ಲಭಭಾಯಿ ಪಟೇಲ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಶಿಕ್ಷಕರಾದ ಸಾಬಣ್ಣ ಹಾಗೂ ಆರತಿ ಇದ್ದರು.

ಸರ್ವೋದಯ ಶಿಕ್ಷಣ ಸಂಸ್ಥೆ: ಶಾಲೆ ಮುಖ್ಯಶಿಕ್ಷಕ ಇಫ್ತಿಕಾರ್ ಅಲಿ ಇನಾಂದಾರ್ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್‌ ಪಟೇಲ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.

ವಿದ್ಯಾರ್ಥಿಗಳಿಗೆ ಏಕತಾ ದಿನದ ಪ್ರತಿಜ್ಞೆ ಬೋಧಿಸಿದರು.ಕಾರ್ಯದರ್ಶಿ ಮೈಬೂಬ್ ಇನಾಂದಾರ್ ಶಿಕ್ಷಕರಾದ ಮೋನಯ್ಯ ಎಸ್ ಕಲಾಲ್ ಮಹಾದೇವಿ ಮಹಾದೇವಿ, ಮಂಜುಳ, ಬಸಮ್ಮ ಚಾಮನಹಳ್ಳಿ, ಭೀಮರಾಯ ಜೆ ಹೂಗಾರ್, ರುಕಿಯಾ ಬಾನು, ಚನ್ನಮ್ಮ ಗೌರಮ್ಮ, ಪ್ರಿಯಾಂಕಾ, ಸಿದ್ದಮ್ಮ, ಮದೀನಾ ಬೇಗಂ, ಪ್ರಾಣೇಶ ಹಾಗೂ ಶರಣಬಸವ ಇದ್ದರು.

ಯರಗೋಳ ಸರ್ಕಾರಿ ಪ್ರೌಢಶಾಲೆ: ಮುಖ್ಯಶಿಕ್ಷಕ ಚಂದ್ರಪ್ಪ ಗುಂಜನೂರ ಸರ್ದಾರ್ ವಲ್ಲಭಭಾಯ್ ಪಟೇಲ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಏಕತಾ ದಿನದ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಶಿಕ್ಷಕರಾದ ಮರೆಪ್ಪ ನವಸೂನ್,ಉಮೇಶ ನರಗುಂದ, ಗೀತಾ ಹಾಗೂ ಸುಧಾ ಇದ್ದರು.

ಯರಗೋಳ ಗ್ರಾ.ಪಂ: ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಮು ಪವಾರ್ ರಾಷ್ಟ್ರೀಯ ಏಕತಾ ದಿವಸ ಅಂಗವಾಗಿ ಸರ್ದಾರ್ ಪಟೇಲ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.

ಪಂಚಾಯಿತಿ ಕಾರ್ಯದರ್ಶಿ ಗೀತಾರಾಣಿ, ಲೆಕ್ಕಿಗ ಗೋವಿಂದಪ್ಪ, ಬಿಲ್ ಕಲೆಕ್ಟರ್ ಶರಣಮ್ಮ, ಮಲ್ಲಿಕಾರ್ಜುನ ಸಂಕ್ರಡಗಿ ಹಾಗೂ ಸಿಪಾಯಿ ಸಿದ್ದರಾಮಪ್ಪ ದಿಬ್ಬ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.