ಯರಗೋಳ: ಗ್ರಾಮದಲ್ಲಿ ಶುಕ್ರವಾರ ರಾತ್ರಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಬರುವ ಕೇಂದ್ರ ನವಗ್ರಾಮ ವ್ಯಾಪ್ತಿಯಲ್ಲಿ ಆನೆಕಾಲು ನಿರ್ಮೂಲನಾ ಕಾರ್ಯಕ್ರಮದ ಡಿಯಲ್ಲಿ ರಕ್ತ ಲೇಪನ ಸಂಗ್ರಹಣೆಯನ್ನು ಮಾಡಲಾಯಿತು.
ಆನೆಕಾಲು ರೋಗವನ್ನು ಉಂಟುಮಾಡುವ ಮೈಕ್ರೊಫೈಲೇರಿಯಾ ಸೂಕ್ಷ್ಮಾಣುಜೀವಿಯು ರಾತ್ರಿಯಲ್ಲಿ ಮನುಷ್ಯನ ರಕ್ತನಾಳದಲ್ಲಿ ಹರಿದಾಡುತ್ತಿರುತ್ತದೆ. ಆದ್ದರಿಂದ ರಕ್ತಲೇಪನ ಸಂಗ್ರಹಣಾ ಕಾರ್ಯಕ್ರಮವನ್ನು ರಾತ್ರಿಯೇ ತೆಗೆದುಕೊಳ್ಳಬೇಕು. ಆಗ ಮಾತ್ರ ಫೈಲೇರಿಯಾ ಕಂಡುಹಿಡಿಯಲು ಸಾಧ್ಯವಾಗುತ್ತದೆ ಎಂದು ಆರೋಗ್ಯ ನಿರೀಕ್ಷಣಾಧಿಕಾರಿ ಶಿವರಾಜ ಹೂಗಾರ ಸಾರ್ವಜನಿಕರಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ಶಿಕ್ಷಣಾಧಿಕಾರಿ ಅಂಬ್ರೇಶ, ಸಂರಕ್ಷಣಾ ಅಧಿಕಾರಿ ಸುನಿತಾ, ಆಶಾ ಕಾರ್ಯಕರ್ತೆ ಸರೋಜಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.