ಹುಣಸಗಿ (ಯಾದಗಿರಿ ಜಿಲ್ಲೆ): ತಾಲ್ಲೂಕಿನ ಕೊಡೇಕಲ್ಲ ಗ್ರಾಮದ ಶಿಲ್ಪ ಕಲಾ ಅಕಾಡೆಮಿ ಪ್ರಶಸ್ತಿ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದ ಬಸಣ್ಣ ಕಾಳಪ್ಪ ಕಂಚಗಾರ (86) ಗುರುವಾರ ಬೆಳಗಿನ ಜಾವ ನಿಧನರಾಗಿದ್ದಾರೆ.
ಮೃತರಿಗೆ ಪತ್ನಿ, 4 ಜನ ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಮೃತರ ಅಂತ್ಯಕ್ರಿಯೆ ಗುರುವಾರ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಬಸಣ್ಣ ಕಂಚಗಾರ ಅವರಿಗೆ 2014 ರಲ್ಲಿ ಶಿಲ್ಪ ಕಲಾ ಅಕಾಡೆಮಿ ಪ್ರಶಸ್ತಿ ಹಾಗೂ 2018 ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಅರಸಿ ಬಂದಿತ್ತು.
ರಾಜ್ಯ ಸೇರಿದಂತೆ ಜಿಲ್ಲೆಯಲ್ಲಿರುವ ಅಪರೂಪದ ಕಾಷ್ಟ ಶಿಲ್ಪಿಗಳಲ್ಲಿ ಹಿರಿಯರಾಗಿದ್ದ ಬಸಣ್ಣ ಕಂಚಗಾರ ಅವರು ವಿವಿಧ ಬಗೆಯ ದೇವರ ಮೂರ್ತಿಗಳನ್ನು ತಮ್ಮ ಕಲಾ ಕೌಶಲದ ಮೂಲಕ ಚಿತ್ರಿಸುವಲ್ಲಿ ಹೆಸರು ವಾಸಿಯಾಗಿದ್ದರು.
ಸಗರ ನಾಡಿನ ಅಪರೂಪದ ಕಲಾವಿದರಲ್ಲಿ ಒಬ್ಬರಾಗಿರುವ ಕೊಡೇಕಲ್ಲ ಗ್ರಾಮದ ಬಸಣ್ಣ ಕಂಚಗಾರ ಅವರು 1939 ಜೂನ್ 1 ರಂದು ಜನಿಸಿದ್ದರು. ಕಂಚಗಾರ, ಕಂಬಾರಿಕೆ, ಎರಕ ಮತ್ತು ವಿವಿಧ ಶಿಲ್ಪ ಕಲಾ ಕೃತಿಗಳನ್ನು ಮಾಡುವುದದಲ್ಲಿ ಮುಂಚೂಣಿಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.