ಶಹಾಪುರ: ನಗರದಲ್ಲಿ ಹಿಂದೂ ಮಹಾಗಣಪತಿ ಮೂರನೇ ವರ್ಷದ ಉತ್ಸವ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಪ್ರತಾಪ ಸಿಂಹ ಹಿಂದೂಗಳ ಒಗ್ಗಟ್ಟಿನ ಬಗ್ಗೆ ಮಾತನಾಡಿದ್ದಾರೆ. ಆದರೆ, ಇಲ್ಲಿನ ಕೆಲವರು ಅದನ್ನೇ ಪ್ರಚೋದನಕಾರಿ ಭಾಷಣ ಎಂದು ಅವರು ಮತ್ತು ಕರಣ ಸುಬೇದಾರ ಸೇರಿದಂತೆ 5 ಜನರ ಮೇಲೆ ಕೇಸು ದಾಖಲಿಸಿರುವದರ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರ ಕೈವಾಡವಿದೆ ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆರೋಪಿಸಿದರು.
ನಗರದ ಸುಬೇದಾರ ಫಾರ್ಮ್ ಹೌಸ್‌ನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಮುಸ್ಲಿಮರ ಓಲೈಕೆಗಾಗಿ ಹಿಂದೂಗಳ ಮೇಲೆ ಕೇಸ್ ದಾಖಲಿಸುವ ಮೂಲಕ ಪೊಲೀಸ್ ಮತ್ತು ಕಾನೂನನ್ನು ದುರ್ಬಳಕೆ ಮಾಡಿಕೊಂಡಿರುವುದು ಖಂಡನೀಯ ಎಂದರು.
ಪೊಲೀಸರು ಕಾನೂನು ಅಡಿಯಲ್ಲಿ ಕೆಲಸ ಮಾಡಬೇಕೆ ವಿನಾ ರಾಜಕಾರಣಿಗಳ ಅಡಿಯಾಳಾಗಿ ಕರ್ತವ್ಯ ನಿರ್ವಹಿಸಬಾರದು. ಹಿಂದೂಗಳ ಮೇಲೆ ನಿರಂತರ ದೌರ್ಜನ್ಯ ಸುಳ್ಳು ಕೇಸು ಮಾಡುವುದನ್ನು ಶ್ರೀರಾಮ ಸೇನೆ ಯಾವತ್ತೂ ಸಹಿಸುವುದಿಲ್ಲ. ಕಾನೂನು ಹತ್ತಿಕ್ಕಲು ನಾವು ಬಿಡುವುದಿಲ್ಲ. ತಾಕತ್ತಿದ್ದರೆ ನ್ಯಾಯ ಹತ್ತಿಕುವ ಪ್ರಯತ್ನಿಸಿ ನೋಡಿ ಎಂದರು.
ಸ್ವಾಮೀಗಳು ರಾಜಕಾರಣಕ್ಕೆ ಬರಬಾರದು ಎನ್ನುವುದು ಹಾಸ್ಯಾಸ್ಪದ: ಕೆಲ ದಿನಗಳ ಹಿಂದೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸ್ವಾಮಿಗಳು ರಾಜಕಾರಣಕ್ಕೆ ಬರುವುದು ಸರಿಯಲ್ಲ ಎನ್ನುವ ಹೇಳಿಕೆ ಹಾಸ್ಯಾಸ್ಪದವಾಗಿದೆ. ರಾಜಕಾರಣಿಗಳು ಅಯೋಗ್ಯರಾಗಿರುವುದರಿಂದ ಕಾವಿಧಾರಿಗಳು ರಾಜಕಾರಣಕ್ಕೆ ಬಂದಿದ್ದಾರೆ. ಇದರಲ್ಲಿ ತಪ್ಪೇನಿದೆ.? ಎಂದರು.
ರಾಜ್ಯದಲ್ಲಿ ಅಮಾಯಕ ರೈತರ ಆಸ್ತಿಯನ್ನು ಮುಸ್ಲಿಂರು ಕಂಬಳಿಸುತ್ತಿದ್ದಾರೆ. ವಿರೋಧ ಪಕ್ಷಗಳಿಗೆ ಇದು ಒಳ್ಳೆ ಅವಕಾಶ. ಸರ್ಕಾರದ ಈ ನೀತಿ ವಿರುದ್ಧ ಹಿಂದೂಗಳು ಒಗ್ಗಟ್ಟಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ. ವಿಶ್ವದಲ್ಲಿರುವ ಏಕೈಕ ನಮ್ಮ ಹಿಂದೂ ರಾಷ್ಟ್ರವನ್ನು ಮುಸ್ಲಿಂ ರಾಷ್ಟ್ರ ಮಾಡಲು ಮಾಡಲು ಹೊರಟಿರುವ ಮುಸ್ಲಿಮರಿಗೆ ತಕ್ಕ ಪಾಠ ಕಲಿಸಬೇಕು ಎಂದರು.
ಬಿಜೆಪಿಯ ಹಿರಿಯ ಮುಖಂಡರಾದ ಚಂದ್ರಶೇಖರ್ ಸುಬೇದಾರ, ಯುವ ಮುಖಂಡ ಕರಣ ಸುಬೇದಾರ, ಜಿಲ್ಲಾ ಘಟಕದ ಉಪಾಧ್ಯಕ್ಷ ರಾಜಶೇಖರ, ಗೂಗಲ್ ಬಿಜೆಪಿ ನಗರ ಮಂಡಲ ಅಧ್ಯಕ್ಷ ಚಂದ್ರಶೇಖರ ಯಾಳಗಿ, ಶ್ರೀರಾಮ ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷ ಶಿವಕುಮಾರ ಶಿರವಾಳ, ದೇವೇಂದ್ರ ಕೋನೇರ, ರಾಜು ಪಂಚಬಾವಿ, ರಾಜಶೇಖರ್ ಪಾಟೀಲ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.