ADVERTISEMENT

ಯಾದಗಿರಿ: ಮುಂಗಾರು ಹಂಗಾಮಿನ ಪ್ರವಾಹದಿಂದಾದ ಬೆಳೆಹಾನಿಗೆ ₹37 ಕೋಟಿ ಪರಿಹಾರ

ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಮಾಹಿತಿ; 57,857 ರೈತರಿಗೆ ಪ್ರಯೋಜನ

​ಪ್ರಜಾವಾಣಿ ವಾರ್ತೆ
Published 30 ಜುಲೈ 2021, 5:07 IST
Last Updated 30 ಜುಲೈ 2021, 5:07 IST
ಡಾ.ರಾಗಪ್ರಿಯಾ
ಡಾ.ರಾಗಪ್ರಿಯಾ   

ಯಾದಗಿರಿ: 2020ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಪ್ರವಾಹದಿಂದ ಬೆಳೆಹಾನಿಯಾದ ರೈತರಿಗೆ ಇದುವರೆಗೆ ₹37.41 ಕೋಟಿ ಪರಿಹಾರ ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಆರ್. ತಿಳಿಸಿದ್ದಾರೆ.

2020ನೇ ಸಾಲಿನ ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳ ಮುಂಗಾರು ಹಂಗಾಮಿನ ಪ್ರವಾಹದಿಂದ ಜಿಲ್ಲೆಯಲ್ಲಿ ಒಟ್ಟು 45,373 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಈ ಪೈಕಿ ಜಿಲ್ಲೆಯ 6 ತಾಲ್ಲೂಕುಗಳಾದ ಗುರುಮಠಕಲ್ 5,809 ಹೆಕ್ಟೇರ್, ಯಾದಗಿರಿ 12851 ಹೆಕ್ಟೇರ್, ವಡಗೇರಾ 10,432 ಹೆಕ್ಟೇರ್, ಶಹಾಪುರ 4,383 ಹೆಕ್ಟೇರ್, ಸುರಪುರ 5,097 ಹೆಕ್ಟೇರ್, ಹುಣಸಗಿ 6,801 ಹೆಕ್ಟೇರ್ ಬೆಳೆಹಾನಿಯಾಗಿದೆ. ಈ ಎಲ್ಲಾ ಬೆಳೆಹಾನಿಗಳಿಗೆ ₹37.41 ಕೋಟಿ ಪಾವತಿ ಸಲಾಗಿದೆ. 57,857 ರೈತರಿಗೆ ಪ್ರಯೋಜನ ವಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರವಾಹ ಬೆಳೆಹಾನಿ: 2021ರಲ್ಲಿ ಇತ್ತೀಚೆಗೆ ಕೃಷ್ಣಾ ನದಿ ಪ್ರವಾಹದಿಂದ ಜಿಲ್ಲೆಯಲ್ಲಿ 1823.56 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಈ ಪೈಕಿ ಶಹಾಪುರ 485 ಹೆಕ್ಟೇರ್, ಸುರಪುರ 307.79 ಹೆಕ್ಟೇರ್, ಹುಣಸಗಿ 40.77 ಹೆಕ್ಟೇರ್, ವಡಗೇರಾ 990 ಹೆಕ್ಟೇರ್ ಬೆಳೆಹಾನಿಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ಮಳೆ ಹಾನಿ: 2021ರ ಜೂನ್ 1ರಿಂದ 27ರವರೆಗೆ ಮಳೆಯಿಂದ ಜಿಲ್ಲೆಯಲ್ಲಿ ಹಲವೆಡೆ ಹಾನಿಯಾಗಿದೆ. ಜಿಲ್ಲೆಯಲ್ಲಿ ಒಟ್ಟು 176 ಮನೆಗಳು, 254.10 ಕಿ.ಮೀ ರಸ್ತೆಗಳು, 22 ಸೇತುವೆಗಳು, 247 ವಿದ್ಯುತ್ ಕಂಬ, 21 ವಿದ್ಯುತ್ ಪರಿವರ್ತಕಗಳು, 3.5 ಕಿ.ಮೀ ವಿದ್ಯುತ್ ತಂತಿಗಳು, 103 ಹೆಕ್ಟೇರ್ ಕೃಷಿ ಮತ್ತು 7.60 ಹೆಕ್ಟೇರ್ ತೋಟಗಾರಿಕೆ ಬೆಳೆಹಾನಿಯಾಗಿದೆ ಎಂದು ತಿಳಿಸಿದ್ದಾರೆ.

ಶಹಾಪುರ ತಾಲ್ಲೂಕಿನಲ್ಲಿ 29 ಮನೆಹಾನಿ, 60 ವಿದ್ಯುತ್ ಕಂಬಗಳು ಮತ್ತು 6 ವಿದ್ಯುತ್ ಪರಿವರ್ತಕಗಳಿಗೆ, 1 ಕಿ.ಮೀ. ವಿದ್ಯುತ್ ತಂತಿ ಹಾನಿಯಾಗಿದೆ. ವಡಗೇರಾ ತಾಲ್ಲೂಕಿನಲ್ಲಿ 30 ಮನೆಹಾನಿ, 30 ವಿದ್ಯುತ್ ಕಂಬ, 1 ವಿದ್ಯುತ್ ಪರಿವರ್ತಕ, 19 ಹೆಕ್ಟೇರ್ ಕೃಷಿ ಬೆಳೆಹಾನಿಯಾಗಿದೆ. ಯಾದಗಿರಿ ತಾಲ್ಲೂಕಿನಲ್ಲಿ 37 ಮನೆಹಾನಿ, 21 ವಿದ್ಯುತ್ ಕಂಬಗಳು, 2 ವಿದ್ಯುತ್ ಪರಿವರ್ತಕಗಳು, 0.5 ಕಿ.ಮೀ. ವಿದ್ಯುತ್ ತಂತಿ, 84 ಹೆಕ್ಟೇರ್ ಕೃಷಿ ಬೆಳೆಹಾನಿ, 0.80 ಹೆಕ್ಟೇರ್ ತೋಟಗಾರಿಕೆ ಬೆಳೆಹಾನಿಯಾಗಿದೆ ಎಂದರು.

ಗುರಮಠಕಲ್ ತಾಲ್ಲೂಕಿನಲ್ಲಿ 20 ಮನೆ ಹಾನಿ, 23 ವಿದ್ಯುತ್ ಕಂಬಗಳು, 1 ವಿದ್ಯುತ್ ಪರಿವರ್ತಕಗಳು, 0.5 ಕಿ.ಮೀ ವಿದ್ಯುತ್ ತಂತಿ ಹಾನಿಯಾಗಿದೆ. ಸುರಪುರ ತಾಲ್ಲೂಕಿನಲ್ಲಿ 30 ಮನೆ ಹಾನಿ, 68 ವಿದ್ಯುತ್ ಕಂಬಗಳು, 8 ವಿದ್ಯುತ್ ಪರಿವರ್ತಕಗಳು, 0.8 ಕಿ.ಮೀ. ವಿದ್ಯುತ್ ತಂತಿ , 6.80 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ.

ಹುಣಸಗಿ ತಾಲ್ಲೂಕಿನಲ್ಲಿ 30 ಮನೆ ಹಾನಿ, 45 ವಿದ್ಯುತ್ ಕಂಬ, 3 ವಿದ್ಯುತ್ ಪರಿವರ್ತಕಗಳು, 0.7 ಕಿ.ಮೀ. ವಿದ್ಯುತ್ ತಂತಿ ಹಾನಿಯಾಗಿದೆ. ಶಹಾಪುರ – ವಡಗೇರಾ ತಾಲ್ಲೂಕಿನಲ್ಲಿ 33.70 ಕಿ.ಮೀ. ರಸ್ತೆ, 11 ಸೇತುವೆ, ಸುರಪುರ-ಹುಣಸಗಿ ತಾಲ್ಲೂಕಿನಲ್ಲಿ 153.50 ಕಿ.ಮೀ. ರಸ್ತೆ, 10 ಸೇತುವೆ, ಗುರಮಠಕಲ್-ಯಾದಗಿರಿ ತಾಲೂಕಿನಲ್ಲಿ 66.90 ಕಿ.ಮೀ. ರಸ್ತೆ ಹಾಗೂ 1 ಸೇತುವೆಗಳಿಗೆ ಹಾನಿಯಾಗಿದೆ ಎಂದು ಅವರು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.