ಯಾದಗಿರಿ: ನಗರದ ಸರ್ಕಾರಿ ಪದವಿ ಕಾಲೇಜುದಿಂದ ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಸಾರ್ವಜನಿಕ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಾಗ ದಾಳಿ ಮಾಡಿದ ಪೊಲೀಸರು ಗಾಂಜಾ, ಎರಡು ಬೈಕ್, 3 ಮೊಬೈಲ್ ವಶಕ್ಕೆ ಪಡೆದು ಮೂರು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ಪರಾರಿಯಾಗಿದ್ದಾನೆ.
ಚಿರಂಜೀವಿ ನಗರದ ಸೂರಜ್ (25), ಸ್ಟೇಷನ್ ಏರಿಯಾದ ಶಿವಾನಂದ (29), ಮುಸ್ಲಿಂಪುರದ ತೌಸಿಫ್ (24) ಬಂಧಿತರಾಗಿದ್ದು, ಹಿರೇಅಗಸಿಯ ಅಜಯ್ (22) ಪರಾರಿಯಾಗಿದ್ದಾನೆ.
ಖಚಿತ ಮಾಹಿತಿ ಮೇರೆಗೆ ನಗರ ಠಾಣೆ ಪಿಎಸ್‌ಐ ಮಂಜನಗೌಡ ಪಾಟೀಲ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸರು ಅಂದಾಜು ₹4 ಸಾವಿರ ಮೌಲ್ಯದ 370 ಗ್ರಾಂ ಗಾಂಜಾ, ₹1,000 ಹಣ, ₹ 15 ಸಾವಿರ ಮೌಲ್ಯದ 3 ಮೊಬೈಲ್ ಹಾಗೂ ₹ 80,000 ಮೌಲ್ಯದ ಪಲ್ಸರ್ ಬೈಕ್ ವಶಪಡಿಸಿಕೊಂಡಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.