ಹುಣಸಗಿ: ‘ಕ್ಷೇತ್ರದ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ, ಅಗತ್ಯ ಚಿಕಿತ್ಸೆ ನೀಡುವುದಕ್ಕೆ ಅಮ್ಮನ ಹೆಸರಿನಲ್ಲಿ ಉತ್ತಮ ದರ್ಜೆಯ ಆಸ್ಪತ್ರೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ’ ಎಂದು ಶಾಸಕ ರಾಜುಗೌಡ ಹೇಳಿದರು.
ಪಟ್ಟಣದಲ್ಲಿ ಅಮ್ಮ ಆಸ್ಪತ್ರೆಗೆ ಭೂಮಿ ಪೂಜೆ ನೇರವೇರಿಸಿ ಬಳಿಕ ಮಾತನಾಡಿದ ಅವರು, ತಾಯಿ ತಿಮ್ಮಮ್ಮ ಗೌಡತಿಯವರ ಸ್ಮರಣಾರ್ಥ 100 ಹಾಸಿಗೆಯುಳ್ಳ ಸುಸಜ್ಜಿತ ಆಸ್ಪತ್ರೆಯ ನಿರ್ಮಾಣ ಮಾಡಲಾಗುವುದು. ತುರ್ತು ಸಂದರ್ಭದಲ್ಲಿ ದೂರದ ನಗರಗಳಿಗೆ ತೆರಳುವುದನ್ನು ತಪ್ಪಿಸಲು ನಮ್ಮಲ್ಲೇ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ದೇವಪುರದ ಶಿವಮೂರ್ತಿ ಶಿವಾಚಾರ್ಯರು, ಪ್ರಭುಲಿಂಗ ಸ್ವಾಮಿಗಳು, ಮರಿಹುಚ್ಚೇಶ್ವರ ಸ್ವಾಮಿಜಿ, ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಶಾಂತಮಯ ಸ್ವಾಮಿಜೀ, ಸಿದ್ಧಮಲ್ಲಿಕಾರ್ಜುನ ಶಿವಾಚಾರ್ಯರು, ಬಂಡೇಪ್ಪನಹಳ್ಳಿ ಶರಣರು, ನಗನೂರು ಶರಣರು ಇದ್ದರು
ಉದ್ಯಮಿ ಎಸ್.ಪಿ ದಯಾನಂದ, ಮುಖಂಡ ಹನುಮಂತನಾಯಕ (ಬಬ್ಲುಗೌಡ), ಬಸವರಾಜಸ್ವಾಮಿ ಸ್ಥಾವರಮಠ, ವಿರೇಶ ಚಿಂಚೋಳಿ, ಎಚ್.ಸಿ ಪಾಟೀಲ್, ಬಸನಗೌಡ ಯಡಿಯಾಪೂರ, ಯಲ್ಲಪ್ಪ ಕುರಕುಂದಿ, ಸುರೇಶ ಸಜ್ಜನ್, ಸಂಗಣ್ಣ ವೈಲಿ, ನಾನಾಗೌಡ ಪಾಟೀಲ್, ಬಿ.ಎಂ ಹಳ್ಳಿಕೋಟಿ, ಎಂ.ಎಸ್ ಚಂದಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.