ADVERTISEMENT

ಗುರುಗಳು ಜೀವನದ ಅವಿಭಾಜ್ಯ ಅಂಗ: ಸೋಮೇಶ್ವರಾನಂದ ಶ್ರೀ

​ಪ್ರಜಾವಾಣಿ ವಾರ್ತೆ
Published 22 ಜುಲೈ 2024, 15:44 IST
Last Updated 22 ಜುಲೈ 2024, 15:44 IST
ಸೈದಾಪುರ ಪಟ್ಟಣದ ವಾಸವಿ ವಿದ್ಯಾ ಸಂಸ್ಥೆಯಲ್ಲಿ ಗುರು ಪೂರ್ಣಿಮೆ ನಿಮಿತ್ತ ಹಮ್ಮಿಕೊಂಡ ಗುರುವಂದನಾ ಮತ್ತು ಮಕ್ಕಳಿಗೆ ಅಕ್ಷರಭ್ಯಾಸ ಕಾರ್ಯಕ್ರಮದಲ್ಲಿ ಸೋಮೇಶ್ವರಾನಂದ ಸ್ವಾಮೀಜಿ ಮಾತನಾಡಿದರು
ಸೈದಾಪುರ ಪಟ್ಟಣದ ವಾಸವಿ ವಿದ್ಯಾ ಸಂಸ್ಥೆಯಲ್ಲಿ ಗುರು ಪೂರ್ಣಿಮೆ ನಿಮಿತ್ತ ಹಮ್ಮಿಕೊಂಡ ಗುರುವಂದನಾ ಮತ್ತು ಮಕ್ಕಳಿಗೆ ಅಕ್ಷರಭ್ಯಾಸ ಕಾರ್ಯಕ್ರಮದಲ್ಲಿ ಸೋಮೇಶ್ವರಾನಂದ ಸ್ವಾಮೀಜಿ ಮಾತನಾಡಿದರು   

ಸೈದಾಪುರ: ಅಜ್ಞಾನ ದೂರ ಮಾಡಿ ಉತ್ತಮ ದಾರಿ ತೋರಿಸುವ ಗುರುಗಳು ಜೀನವದ ಅವಿಭಾಜ್ಯ ಅಂಗ ಎಂದು ಸಿದ್ದಚೇತನಾಶ್ರಮ ಸಿದ್ದಾರೂಢಮಠದ ಸೋಮೇಶ್ವರಾನಂದ ಶ್ರೀಗಳು ಅಭಿಪ್ರಾಯಪಟ್ಟರು.

ಪಟ್ಟಣದ ವಾಸವಿ ವಿದ್ಯಾ ಸಂಸ್ಥೆಯಲ್ಲಿ ಗುರು ಪೂರ್ಣಿಮೆ ನಿಮಿತ್ತ ಹಮ್ಮಿಕೊಂಡ ಗುರುವಂದನಾ ಮತ್ತು ಮಕ್ಕಳಿಗೆ ಅಕ್ಷರಭ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಮ್ಮ ಅನುಭವದ ಶಕ್ತಿಯಿಂದ ತಪ್ಪು ತಿದ್ದುವ ಗುರುಗಳ ಮಾರ್ಗದರ್ಶನದಿಂದ ವಿದ್ಯಾರ್ಥಿಗಳು ಉತ್ತಮ ಬದಕನ್ನು ಕಂಡು ಕೊಳ್ಳಲು ಸಾಧ್ಯವಿದೆ ಎಂದರು.

ADVERTISEMENT

ಸಂಸ್ಥೆಯ ಅಧ್ಯಕ್ಷ ರಾಘವೇಂದ್ರ ಬಾದಾಮಿ, ವಿದ್ಯಾರ್ಥಿಗಳು ವಿದ್ಯಾಭ್ಯಾಸದೊಂದಿಗೆ ಯಶಸ್ವಿಯಾಗಿ ಸಾಧನೆ ಮಾಡುತ್ತ ಮಹತ್ವದ ಗುರಿ ಇಟ್ಟುಕೊಂಡು ಸಾಗಬೇಕು ಎಂದರು.

ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಶ್ರೀಗಳು ಅಕ್ಷರಭ್ಯಾಸ ಮಾಡಿಸಿ ಅದರ ಮಹತ್ವ ತಿಳಿಸಿಕೊಟ್ಟರು. ಆರ್ಯ ವೈಶ್ಯ ಸೇವಾ ಸಂಘದ ಅಧ್ಯಕ್ಷ ನಾರಾಯಣಪ್ಪ ಪಾಲದಿ, ಕಾರ್ಯದರ್ಶಿ ವೆಂಕಟೇಶ ಪುರಿ, ಶ್ರೀನಿವಾಸ ಬದ್ದೇಪಲ್ಲಿ, ಮುಖ್ಯಗುರು ಬಿ.ಬಿ ವಡವಟ್, ಶಿಕ್ಷಕರಾದ ರಾಧಾ ಸಂಗೋಳಗಿ, ಕಾಸಿಂಬಿ ಐ.ಕೊನಂಪಲ್ಲಿ, ಸಂತೋಷ ದೇಸಾಯಿ, ಕಾಶಿನಾಥ ಮಡಿವಾಳ, ಸುನೀತಾ ತಾರೇಶ, ಮಹೇಶ ಬಾಗ್ಲಿ, ದೇವೀಂದ್ರಕುಮಾರ ಮುನಗಾಲ, ಚಂದ್ರಕಲಾ, ಬಸಮ್ಮ ಕಲಬುರಗಿ ಸೇರಿದಂತೆ ಶಾಲಾ ವಿದ್ಯಾರ್ಥಿಗಳು, ಪಾಲಕರು ಸೇರಿದಂತೆ ಇತರರಿದ್ದರು.

ಸೈದಾಪುರ ಪಟ್ಟಣದ ವಾಸವಿ ವಿದ್ಯಾ ಸಂಸ್ಥೆಯಲ್ಲಿ ಗುರು ಪೂರ್ಣಿಮೆ ನಿಮಿತ್ತ ಸೋಮೇಶ್ವರಾನಂದ ಶ್ರೀಗಳು ಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.