ಯಾದಗಿರಿ: ಗುರುಮಠಕಲ್ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಲಗೇರಾದಲ್ಲಿ ಶಿಶು ಅಭಿವೃದ್ಧಿ ಯೋಜನೆ ಹಾಗೂ ವಿವಿಧ ಇಲಾಖೆಗಳಆಶ್ರಯದಲ್ಲಿ ಪೋಷಣ ಮಾಸಾಚರಣೆ ಈಚೆಗೆ ಹಮ್ಮಿಕೊಳ್ಳಲಾಗಿತ್ತು.
ಗುರುಮಠಕಲ್ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಭೀಮರಾಯ ಕಣ್ಣೂರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 2020-21ನೇ ಸಾಲಿನ ಅಭಿಯಾನದ ಯೋಜನೆಯ ಮುಖ್ಯ ಗುರಿ ಅಪೌಷ್ಟಿಕತೆ ನಿರ್ಮೂಲನೆ ಮಾಡುವುದು, ಪೌಷ್ಟಿಕ ಕೈತೋಟ ನಿರ್ಮಾಣ ಮಾಡುವುದಾಗಿದೆ. ಪೌಷ್ಟಿಕಾಂಶ ಭರಿತ ಹಣ್ಣುಗಳು, ತರಕಾರಿಗಳ ಸೇವನೆಯಿಂದ ಗರ್ಭಿಣಿ-ಬಾಣಂತಿಯರ ಆರೋಗ್ಯ ಸ್ಥಿತಿಯನ್ನು ಸುಧಾರಿಸಬಹುದು ಹಾಗೂ ಮುಂದೆ ಜನಿಸುವ ಶಿಶುಗಳು ಸಹ ಸದೃಢವಾಗಿರಲು ಸಾಧ್ಯ. ಆದ್ದರಿಂದ ಸ್ಥಳಾವಕಾಶ ಇರುವ ಪ್ರತಿ ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿ-ಬಾಣಂತಿ ಮನೆಗಳ ಹತ್ತಿರ ಪೌಷ್ಟಿಕ ಕೈತೋಟ ನಿರ್ಮಾಣ ಮಾಡಲು ತಿಳಿವಳಿಕೆ ನೀಡಿ ಅಪೌಷ್ಟಿಕತೆ ನಿರ್ಮೂಲನೆ ಮಾಡಬೇಕು ಎಂದು ತಿಳಿಸಿದರು.
ವೈದ್ಯಾಧಿಕಾರಿ ಭಾಗರೆಡ್ಡಿ ಮಾತನಾಡಿ, ಮಗುವು ವಯಸ್ಸಿಗೆ ತಕ್ಕ ಎತ್ತರ ಹಾಗೂ ತೂಕ ಹೊಂದಿರಬೇಕು. ಮಕ್ಕಳಲ್ಲಿ ತ್ರೀವ್ರ ಅಪೌಷ್ಟಿಕತೆ ಗುರುತಿಸಿ, ಚಿಕಿತ್ಸೆ ನೀಡಬೇಕು. ಪ್ರತಿ ಪಂಚಾಯಿತಿ ಮಟ್ಟದಲ್ಲಿ ವಿಶೇಷ ಪೋಷಣ ಸಭೆಗಳನ್ನು ಆಯೋಜಿಸಬೇಕು. ತೀವ್ರ ಅಪೌಷ್ಟಿಕ ಮಕ್ಕಳನ್ನು ಗುರುತಿಸಿ ಅಂಥ ಮಕ್ಕಳಿಗೆ ಇಲಾಖೆಯಿಂದ ಸಿಗುವ ಎಲ್ಲಾ ಸೌಲಭ್ಯಗಳ ಜೊತೆ ಎನ್‍ಆರ್‌ಸಿ ಕೇಂದ್ರಕ್ಕೆ ದಾಖಲು ಮಾಡಿ ಆರೋಗ್ಯ ಸೇವೆ ನೀಡಲು ಎಲ್ಲಾ ಮೇಲ್ವಿಚಾರಕಿಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರು ಕ್ರಮವಹಿಸಬೇಕು. ಕೋವಿಡ್-19 ಮುಂಜಾಗ್ರತಾ ಕ್ರಮಗಳನ್ನು ಪಾಲನೆ ಮಾಡಬೇಕು ಎಂದು ತಿಳಿಸಿದರು.
ಮಹಿಳಾ ಮೇಲ್ವಿಚಾರಕಿ ಕವಿತಾ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಗುರುಮಠಕಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಬಸಪ್ಪ, ಪುರಸಭೆ ಸದಸ್ಯರಾದ ಆಶಣ್ಣ ಬುದ್ಧ, ಭೀಮಮ್ಮ, ಪಾಪಣ್ಣ ಮನ್ನೆ, ಪವಿತ್ರ ಮನ್ನೆ, ಸೈಯದ್ ಖಾಜಾ ಮೈನೂದ್ಧೀನ್, ಅನ್ವರ್, ಮೌಲನ ಬೀ, ಕೃಷ್ಣಾ, ಸವಿತಾ ಕಂದೂರ, ಪಾಪರೆಡ್ಡಿ ಬುರ್ಜ, ಬಾಬು ತಲಾರಿ, ನರ್ಮದಾ, ಪ್ರೀತಿ ಅಂಬದಾಸ್, ಮಹ್ಮದ ಸಿರಾಜ್, ಬಾಲಪ್ಪ ದಾಸರಿ, ಚಂದುಲಾಲ್, ಅಶೋಕ ಕಲಾಲ್ ಹಾಗೂ ವಲಯ ಮಹಿಳಾ ಮೇಲ್ವಿಚಾರಕಿ ರೇಣುಕಾ ಯಲಗೋಡ ಇದ್ದರು.
ಗುರುಮಠಕಲ್ ಅಂಗನವಾಡಿ ಕಾರ್ಯಕರ್ತೆ ಸಂತೋಷಿ ಪ್ರಾರ್ಥನೆ ಗೀತೆ ಹಾಡಿದರು. ಮಹಿಳಾ ಮೇಲ್ವಿಚಾರಕಿ ಕವಿತಾ ಕುಲಕರ್ಣಿ ಸ್ವಾಗತಿಸಿದರು. ಮಹಿಳಾ ಮೇಲ್ವಿಚಾರಕಿ ರೇಣುಕಾ ಯಲಗೋಡ ನಿರೂಪಿಸಿದರು. ಅಂಗನವಾಡಿ ಕಾರ್ಯಕರ್ತೆರು ಅಂಗನವಾಡಿ ಸಹಾಯಕಿರು, ಮಕ್ಕಳ ತಾಯಂದಿರು, ಗರ್ಭಿಣಿ ಹಾಗೂ ಬಾಣಂತಿಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.