ಹುಣಸಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಜ್ಜಲ, ಚನ್ನೂರು ಸೇರಿದಂತೆ ಇತರ ಗ್ರಾಮೀಣ ಭಾಗದಲ್ಲಿ ಮಕ್ಕಳು, ಯುವಕರು ಮಹಿಳೆಯರು ಹೋಳಿ ಹಬ್ಬದ ಅಂಗವಾಗಿ ರಂಗಿನಾಟವಾಡಿ ಸಂಭ್ರಮಿಸಿದರು.
ಹುಣಸಗಿ ಪಟ್ಟಣದಲ್ಲಿ ಯುವಕರು ಕಾಮದಹನ ಮಾಡಿ ಸಂಭ್ರಮಿಸಿದರು. ಪಟ್ಟಣದ ಬೀದಿ ಬೀದಿಯಲ್ಲಿ ಯುವಕರು ತಂಡೋಪತಂಡವಾಗಿ ಹಲಗೆಯ ನಾದಕ್ಕೆ ಹೆಜ್ಜೆ ಹಾಕುತ್ತಾ ಪರಸ್ಪರ ಬಣ್ಣ ಎರಚಿ ರಂಗಿನಾಟದಲ್ಲಿ ತೊಡಗಿದ್ದರು.
ಮಕ್ಕಳು ಬಣ್ಣದ ನೀರಿನ ಬಾಟಲ್‌ಗಳನ್ನು ಹಿಡಿದು ತಮ್ಮ ಗೆಳೆಯರ ಮನೆಗಳಿಗೆ ತೆರಳಿ ಪರಸ್ಪರ ಬಣ್ಣ ಎರಚುತ್ತಾ ಓಣಿ ಅಂಗಳದಲ್ಲಿ ಓಡಾಡಿದರು.
ಹೋಳಿ ಹಬ್ಬದ ಅಂಗವಾಗಿ ಪಟ್ಟಣದಲ್ಲಿ ಯಾವುದೇ ಅಂಗಡಿ ಮುಂಗಟ್ಟು ತೆರೆದಿರಲಿಲ್ಲ. ವ್ಯಾಪಾರಸ್ಥರು ಕೂಡಾ ತಮ್ಮ ಕುಟುಂಬ ಸದಸ್ಯರೊಂದಿಗೆ ಕೂಡಿ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.