ADVERTISEMENT

ಗುರುಮಠಕಲ್; ವಸತಿ ಯೋಜನೆ ಹಕ್ಕುಪತ್ರ ವಿತರಣೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2023, 4:32 IST
Last Updated 1 ಮಾರ್ಚ್ 2023, 4:32 IST
ಗುರುಮಠಕಲ್ ಪುರಸಭೆ ಕಚೇರಿಯಲ್ಲಿ ಶಾಸಕ ನಾಗನಗೌಡ ಕಂದಕೂರ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿದರು
ಗುರುಮಠಕಲ್ ಪುರಸಭೆ ಕಚೇರಿಯಲ್ಲಿ ಶಾಸಕ ನಾಗನಗೌಡ ಕಂದಕೂರ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿದರು   

ಗುರುಮಠಕಲ್: ಕಳೆದ 30 ವರ್ಷಗಳಿಂದ ನನೆಗುದಿಗೆ ಬಿದಿದ್ದ ನಿವೇಶನ ಹಂಚಿಕೆ ಕಾರ್ಯ ನನ್ನ ಅವಧಿಯಲ್ಲಿ ಪೂರ್ಣಗೊಂಡಿದೆ. ಆದ್ಯತೆಯಲ್ಲಿ ಕೆಲಸ ಮಾಡಿದ ತೃಪ್ತಿ ಸಿಕ್ಕಿದೆ ಎಂದು ಶಾಸಕ ನಾಗನಗೌಡ ಕಂದಕೂರ ತಿಳಿಸಿದರು.

ಪಟ್ಟಣದ ಪುರಸಭೆ ಕಚೇರಿಯಲ್ಲಿ ಮಂಗಳವಾರ ರಾಜೀವಗಾಂಧಿವಸತಿ ನಿಗಮದ ಆಶ್ರಯ ಯೋಜನೆಯ ಫಲಾನುಭವಿಗಳಿಗೆ ನಿವೇಶನ ಹಕ್ಕು ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪಟ್ಟಣದ ಸರ್ವೇ ನಂ.19ರಲ್ಲಿ 33 ಜನ, 20 ರಲ್ಲಿ 30 ಜನ ಹಾಗೂ 25 ರಲ್ಲಿ 131 ಜನ ಪಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲಾಗಿದೆ. ಏನಾದರೂ ಗೊಂದಲಗಳಿದ್ದರೆ ನನ್ನ ಗಮನಕ್ಕೆ ತನ್ನಿ, ಸರಿಪಡಿಸುತ್ತೇನೆ ಎಂದರು.

ADVERTISEMENT

ಪುರಸಭೆ ಮುಖ್ಯಾಧಿಕಾರಿ ಭಾರತಿ ಸಿ.ದಂಡೋತಿ ಮಾತನಾಡಿದರು.

ಉಪತಹಶೀಲ್ದಾರ್ ಎಜಾಜ್ ಉಲ್ ಹಕ್, ಅಧ್ಯಕ್ಷ ಪಾಪಣ್ಣ ಮನ್ನೆ, ಉಪಾಧ್ಯಕ್ಷೆ ಭೀಮವ್ವ ಮುಕುಡಿ, ಸದಸ್ಯ ನವಾಜರೆಡ್ಡಿ ಪಾಟೀಲ, ಆಶ್ರಯ ಯೋಜನೆ ಸಮಿತಿ ಸದಸ್ಯರಾದ ವೆಂಕಟರಾಮುಲು, ಮಮ್ತಾಜ್ ಬೇಗಂ, ನರಸಪ್ಪ ಬೋಯ, ಪರಿಸರ ಇಂಜಿನಿಯರ್ ಪರುಶುರಾಮ, ನೈರ್ಮಲ್ಯಾಧಿಕಾರಿ ರಾಮುಲು, ಅಶೋಕ ಇದ್ದರು.

‘ಕಾಂಗ್ರೆಸ್‌ನಿಂದ ಸುಳ್ಳು ಆರೋಪ’: ಕೆರೆ ತುಂಬುವ ಯೋಜನೆ ಕಾಮಗಾರಿ ನಿಲ್ಲಿಸದ ಕುರಿತು ಕಾಂಗ್ರೆಸ್ ಮುಖಂಡರು ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಶಾಸಕ ನಾಗನಗೌಡ ಕಂದಕೂರ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನ ₹440 ಕೋಟಿ ವೆಚ್ಚದ 61 ಕೆರೆ ತುಂಬುವ ಯೋಜನೆಯ ಕುರಿತು ವಿರೋಧಿಗಳ ಆರೋಪಗಳು ಕೇವಲ ರಾಜಕೀಯ ಪ್ರೇರಿತ. ಕೆರೆ ತುಂಬುವ ಯೋಜನೆಯ ಪೈಪ್ ಲೈನ್ ಕಾಮಗಾರಿ ವಿಷಯದಲ್ಲಿ ನಮ್ಮ ಜಮೀನಿನಲ್ಲಿ ಬೆಳೆಯಿದ್ದರಿಂದ ಫಸಲು ಕೈಸೇರಿದ ನಂತರ ಕಾಮಗಾರಿ ಮಾಡುವಂತೆ, ಅಲ್ಲಿಯವರೆಗೆ ಉಳಿದ ಕಾಮಗಾರಿ ಪೂರ್ಣಗೊಳಿಸುವಂತೆ ಕಾಮಗಾರಿ ಮಾಡುವವರಿಗೆ ಕೋರಿದ್ದೆ. ಅದರಂತೆ ಭಾನುವಾರ ನಮ್ಮ ಜಮೀನಿನ ಬೆಳೆ ಕೊಯ್ದು ಫಸಲು ಪಡೆದಿದ್ದು, ಕಾಮಗಾರಿ ಮಾಡುವಂತೆ ತಿಳಿಸಿದ್ದೇನೆ ಎಂದು ಹೇಳಿದರು.

ಪಕ್ಷದಿಂದ ಪಕ್ಷಕ್ಕೆ ಬದಲಾಗುವವರ ಕುರಿತು ಮಾತನಾಡಲಾರೆ ಹಾಗೂ ಹಿಂದೆ ರೈತರ ಹೊಲದಲ್ಲಿ ಬೊರ್ ವೆಲ್ ಹಾಕಿಸಿ ಕಮಿಶನ್ ಪಡೆದವರು ಮತ್ತು ಕೋವಿಡ್ ಸಮಯದಲ್ಲಿ ಜನರಿಗೆ ಯಾಮಾರಿಸಿದವರು ಈಗ ನನ್ನ ಮೇಲೆ ಕಮಿಶನ್ ಆರೋಪ ಮಾಡುತ್ತಿರುವುದು ಹಾಸ್ಯಾಸ್ಪದ ಎಂದರು.

ಜೆಡಿಎಸ್ ಬ್ಲಾಕ್ ಅಧ್ಯಕ್ಷ ಪ್ರಕಾಶ ನಿರೇಟಿ, ಜಿ.ತಮ್ಮಣ್ಣ, ಕೃಷ್ಟರೆಡ್ಡಿ ಗವಿನೋಳ, ಬಸಣ್ಣ ದೇವರಳ್ಳಿ
ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.