ADVERTISEMENT

ಸಂಭ್ರಮದ ಮಾರಿಯಮ್ಮ ದೇವಿ ಜಾತ್ರೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2024, 5:45 IST
Last Updated 21 ಮಾರ್ಚ್ 2024, 5:45 IST
ಜಾತ್ರೆ ನಿಮಿತ್ತ ನಾರಾಯಣಪುರ ಸಮೀಪದ ಬಂಡೆಗುಡ್ಡ ಕ್ಯಾಂಪ್‌ನ ಮಾರಿಯಮ್ಮ ದೇವಿಗೆ ವಿಶೇಷ ಅಲಂಕಾರ ಮಾಡಿರುವುದು
ಜಾತ್ರೆ ನಿಮಿತ್ತ ನಾರಾಯಣಪುರ ಸಮೀಪದ ಬಂಡೆಗುಡ್ಡ ಕ್ಯಾಂಪ್‌ನ ಮಾರಿಯಮ್ಮ ದೇವಿಗೆ ವಿಶೇಷ ಅಲಂಕಾರ ಮಾಡಿರುವುದು   

ನಾರಾಯಣಪುರ: ಇಲ್ಲಿನ ಬಂಡೆಗುಡ್ಡ ಕ್ಯಾಂಪ್‌ನ ಮಾರಿಯಮ್ಮ ದೇವಿಯ ಜಾತ್ರೆ ಬುಧವಾರ ಸಂಭ್ರಮದಿಂದ ಜರುಗಿತು.

ಬೆಳಿಗ್ಗೆ ದೇವಸ್ಥಾನದ ಮುಖ್ಯ ಅರ್ಚಕರು ವಿವಿಧ ವಾದ್ಯ ಮೇಳಗಳೊಂದಿಗೆ ಕೃಷ್ಣಾ ನದಿ ತಟಕ್ಕೆ ತೆರಳಿ ಗಂಗಾ ಜಲವನ್ನು ಕರಗ ಜೋಡಣೆಯೊಂದಿಗೆ ಮೆರವಣಿಗೆ ಮೂಲಕ ತಂದರು. ಬಳಿಕ ದೇವಿಯ ಮೂರ್ತಿ, ಆಯುಧಗಳಿಗೆ ಜಲಾಭಿಷೇಕ ಮಾಡುವ ಮೂಲಕ ಜಾತ್ರೆಗೆ ಚಾಲನೆ ನೀಡಿದರು.

ದೇವಿಯನ್ನು ವಿವಿಧ ಬಗೆಯ ಹೂವು, ವಸ್ತ್ರಗಳಿಂದ ಅಲಂಕರಿಸಲಾಗಿತ್ತು.

ADVERTISEMENT

ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಸ್ಥಳೀಯ ಮುಖಂಡರು, ಬಂಡೆಗುಡ್ಡ ಕ್ಯಾಂಪ್‌ನ ಭಕ್ತರು ಉಪಸ್ಥಿತರಿದ್ದರು.

ನಾರಾಯಣಪುರ ಸಮೀಪದ ಬಂಡೆಗುಡ್ಡ ಕ್ಯಾಂಪ್‌ ಮಾರಿಯಮ್ಮ ದೇವಿ ದೇವಸ್ಥಾನಕ್ಕೆ ಭಕ್ತರು ಮೆರವಣಿಗೆ ಮೂಲಕ ಆಗಮಿಸಿ ಪೂಜೆ ನೆರವೇರಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.