ADVERTISEMENT

ಹುರಸಗುಂಡಗಿ: ವಿಷ ಸೇವಿಸಿ ಪ್ರೇಮಿಗಳ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2023, 4:50 IST
Last Updated 19 ಫೆಬ್ರುವರಿ 2023, 4:50 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶಹಾಪುರ: ತಾಲ್ಲೂಕಿನ ಹುರಸಗುಂಡಗಿ ಗ್ರಾಮದ ಹೊಲದಲ್ಲಿ ಈಶಪ್ಪ ಯಮನಪ್ಪ (24) ಮತ್ತು ಸುವರ್ಣಾ ಬಸವರಾಜ (22) ಎಂಬ ಇಬ್ಬರು ಪ್ರೇಮಿಗಳು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

‘ಸುವರ್ಣಾ ಸ್ಥಳದಲ್ಲೇ ಮೃತಪಟ್ಟರೆ, ಈಶಪ್ಪ ಶಹಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಇಬ್ಬರೂ ಐದು ವರ್ಷಗಳಿಂದ ಪ್ರೀತಿಸುತ್ತಿದ್ದರು. ಎರಡು ವರ್ಷದ ಹಿಂದೆ ಸುವರ್ಣಾಗೆ ಬೇರೆ ವ್ಯಕ್ತಿಯ ಜೊತೆ ವಿವಾಹ ಮಾಡಲಾಗಿತ್ತು. ಕೂಲಿಗೆಲಸಕ್ಕೆಂದು ದಂಪತಿ ಬೆಂಗಳೂರಿಗೆ ಹೋಗಿದ್ದರು. ಶುಕ್ರವಾರ ಪತಿಯ ಗಮನಕ್ಕೆ ತಾರದೇ ಸುವರ್ಣಾ ಹುರಸಗುಂಡಗಿ ಬಂದಿದ್ದರು. ಈಶಪ್ಪಗೆ ವಿವಾಹ ಆಗಿರಲಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.

ಭೀಮರಾಯನಗುಡಿ ಠಾಣೆಯ ಪಿಎಸ್ಐ ಗಜಾನನ ಬಿರೆದಾರ ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.