ADVERTISEMENT

ಪೊಲೀಸರಿಂದ ಬೇಸತ್ತು ರಾಜೀನಾಮೆಗೆ ಮುಂದಾಗಿದ್ದೆ: ಶಾಸಕ ಕಂದಕೂರ

​ಪ್ರಜಾವಾಣಿ ವಾರ್ತೆ
Published 4 ಜುಲೈ 2024, 9:07 IST
Last Updated 4 ಜುಲೈ 2024, 9:07 IST
<div class="paragraphs"><p>ಜನಸ್ಪಂದನಾ ಕಾರ್ಯಕ್ರಮ</p></div>

ಜನಸ್ಪಂದನಾ ಕಾರ್ಯಕ್ರಮ

   

ಗುರುಮಠಕಲ್‌ (ಯಾದಗಿರಿ ಜಿಲ್ಲೆ): 'ನನ್ನ ಮತಕ್ಷೇತ್ರದಲ್ಲಿನ ಪೊಲೀಸ್ ಇಲಾಖೆಯ ಅಧಿಕಾರಿಗಳ ನಡೆ ಮತ್ತು ಭ್ರಷ್ಟಾಚಾರಕ್ಕೆ ಬೇಸತ್ತು ರಾಜೀನಾಮೆಗೆ ಮುಂದಾಗಿದ್ದೆ' ಎಂದು ಶಾಸಕ ಶರಣಗೌಡ ಕಂದಕೂರ ತಮ್ಮ ಅಸಹಾಯಕತೆ ಹೊರಹಾಕಿದರು.

ಗುರುವಾರ ಪಟ್ಟಣದ ತಾಲ್ಲೂಕು ಮಟ್ಟದ ಜನಸ್ಪಂದನಾ ಕಾರ್ಯಕ್ರಮದಲ್ಲಿ 'ಪೊಲೀಸ್‌ ಇಲಾಖೆಯ ವಿರುದ್ಧ ಹರಿಹಾಯ್ದ ಅವರು, ರಾಜೀನಾಮೆ ಪತ್ರ ನೀಡಲು ಸ್ಪೀಕರ್ ಅವರ ಅಪಾಯಿಂಟ್‌ಮೆಂಟ್‌ ಪಡೆದಿದ್ದೆ' ಎಂದು ಹೇಳಿದರು.

ADVERTISEMENT

'ಗುರುಮಠಕಲ್‌ ಪೊಲೀಸರು ಭ್ರಷ್ಟಾಚಾರದ ರೇಟ್‌ ಕಾರ್ಡ್‌ ಮಾಡಿಕೊಂಡಿದ್ದಾರೆ. ಈ ಕುರಿತು ಡಿವೈಎಸ್‌ಪಿ ಅವರಿಗೆ ವಾರದಲ್ಲಿ ಹತ್ತುಬಾರಿ ಕರೆ ಮಾಡಿ ದೂರಿದ್ದೇನೆ. ಆದರೆ, ಕ್ರಮ ಏನಾಯ್ತು? ಏನು ಮಾಡಿದಿರಿ?' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಸಾಮಾಜಿಕ ಕಾರ್ಯಕರ್ತ ಸಂಜು ಅಳೆಗಾರ ಅವರು ಕ್ಷೇತ್ರದಲ್ಲಿ ಅಕ್ರಮ ಮರಳು, ಜೂಜಾಟ, ಮಟ್ಕಾ, ಟ್ರಾಫಿಕ್‌ನಲ್ಲಿ ರಸೀದಿ ನೀಡದೆ ಹಣ ವಸೂಲಿ ಕುರಿತು ಸೂಕ್ತ ಕ್ರಮವಹಿಸಲು ಕೋರಿ ಕಾರ್ಯಕ್ರಮದಲ್ಲಿ ಮನವಿ ಪತ್ರ ನೀಡಿದರು.

ವಿಷಯದ ಕುರಿತು ಶಾಸಕರೂ 'ನಾನೂ ಸಹ ಹಲವು ಬಾರಿ ಗುರುಮಠಕಲ್‌ ಪೊಲೀಸ್‌ ಅಧಿಕಾರಿಗಳ ಕುರಿತು ಡಿವೈಎಸ್‌ಪಿಗೆ ದೂರು ನೀಡಿದ್ದೆ. ಆದರೆ, ಕ್ರಮವಹಿಸಲು ಸಿದ್ದವಿಲ್ಲವೇಕೆ?' ಎಂದು ಕುಪಿತರಾದರು.

'ಪೊಲೀಸ್‌ ಇಲಾಖೆಯೇ ನಮ್ಮ ಕ್ಷೇತ್ರದ ಭ್ರಷ್ಟಾಚಾರದ ಕೇಂದ್ರವಾಗಿದೆ. ನನಗೆ ಪೊಲೀಸ್‌ ಠಾಣೆ ಮತ್ತು ಅಧಿಕಾರಿಗಳ ನಡೆಯೇ ದೊಡ್ಡ ಸಮಸ್ಯೆಯಾಗಿದೆ ಮತ್ತು ಇಲಾಖೆಯ ನಡತೆಗೆ ಬೇಸತ್ತಿರುವೆ. ಇಲಾಖೆ ಕುರಿತು ಹೀಗೆ ಮಾತಾಡಲು ನನಗೂ ನೋವಿದೆ. ಆದರೆ, ಸಮಸ್ಯೆಯ ತೀವ್ರತೆಯ ನೋವು ಅದಕ್ಕಿಂತಲೂ ಹೆಚ್ಚಿನದು' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.