ಸುರಪುರ: ತಾಲ್ಲೂಕಿನ ಹಾಲಭಾವಿ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ-ಹಸಿರು ಸೇನೆಯವರು ಅಬಕಾರಿ ಅಧಿಕಾರಿಗೆ ಮನವಿ ಸಲ್ಲಿಸಿದರು.
ಈಲ್ಲಾ ಸಮಿತಿ ಅಧ್ಯಕ್ಷ ಅಯ್ಯಣ್ಣ ಜಂಬಲದಿನ್ನಿ ಮಾತನಾಡಿ ‘ಹಾಲಭಾವಿ ಗ್ರಾಮದಲ್ಲಿ ಕಿರಾಣಿ ಅಂಗಡಿ, ಹೊಟೇಲ್, ಪಾನ್ ಡಬ್ಬಗಳಲ್ಲಿ ರಾಜಾರೋಷವಾಗಿ ಅನಧಿಕೃತವಾಗಿ ಮದ್ಯವನ್ನು ಮಾರಾಟ ಮಾಡಲಾಗುತ್ತಿದೆ’ ಎಂದು ದೂರಿದರು.
‘ವಿದ್ಯಾರ್ಥಿಗಳು, ಕೃಷಿ ಕೂಲಿ ಕಾರ್ಮಿಕರು, ರೈತಾಪಿ ವರ್ಗದವರು ಕುಡಿತದ ಚಟಕ್ಕೆ ಬಲಿಯಾಗಿ ಸಂಸಾರ ಹಾಳು ಮಾಡಿಕೊಳ್ಳುತ್ತಿದ್ದಾರೆ. ಮಹಿಳೆಯರು ದಿನವಿಡಿ ದುಡಿದು ಹಣ ತಂದಿರುತ್ತಾರೆ. ಆದರೆ ಅವರಿಗೆ ಕಿರುಕುಳ ನೀಡಿ ಅವರಿಂದ ಹಣ ಕಿತ್ತುಕೊಂಡು ಹೋಗಿ ಮದ್ಯದ ಅಂಗಡಿಗೆ ಇಡುತ್ತಿದ್ದಾರೆ. ಕುಡಿದು ಬಂದು ಸಿಕ್ಕ ಸಿಕ್ಕವರಿಗೆ ಬೈಯುವುದರಿಂದ ಗ್ರಾಮದಲ್ಲಿ ಅಶಾಂತಿ ಉಂಟಾಗಿ ವೈಮನಸ್ಸಿನಿಂದ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಹೇಳಿದರು.
ತಾಲ್ಲೂಕು ಸಮಿತಿ ಅಧ್ಯಕ್ಷ ಹಣಮಂತ್ರಾಯ ಚಂದಲಾಪುರ, ಗೌರವಾಧ್ಯಕ್ಷ ಮಲ್ಲಣ್ಣ ಹಾಲಭಾವಿ, ಪ್ರಮುಖರಾದ ಶಾಂತಗೌಡ, ಹುಸೇನಸಾಬ್, ಬಸವರಾಜ ಗುರುವಿನ್, ದಂಡಪ್ಪ ಗುಳಬಾಳ, ನಾಗಪ್ಪ ದೊರೆ, ಬಸವರಾಜ ಬಿರಾದಾರ್, ಬಸವರಾಜ ಜಂಬಲದಿನ್ನಿ, ಭಾಗಣ್ಣ ಮಾಲಿ ಬಿರಾದಾರ್, ದೇವಿಂದ್ರಪ್ಪ ಬಿರಾದಾರ್, ಹುಸನಪ್ಪ ಚಲುವಾದಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.