ಶಹಾಪುರ: ‘ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಇಂತಹ ಧಾರ್ಮಿಕ ಕಾರ್ಯಗಳ ಅಗತ್ಯವಿದೆ. ಪುಣ್ಯ ಕಾರ್ಯಗಳಿಂದ ಸಮಾಜದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ, ಅನಾಚಾರ ತಡೆಯಲು ಸಹಕಾರಿಯಾಗುತ್ತದೆ. ಧಾರ್ಮಿಕ ಕಾರ್ಯಗಳು ಮನಸ್ಸಿಗೆ ಮುದ ನೀಡುತ್ತವೆ’ ಎಂದು ಯಾದಗಿರಿ ಶಾಸಕ ಚೆನ್ನಾರಡ್ಡಿ ಪಾಟೀಲ ತುನ್ನೂರ ತಿಳಿಸಿದರು.
ತಾಲ್ಲೂಕಿ ದೋರನಹಳ್ಳಿ ಗ್ರಾಮದ ವಿಶ್ವಕರ್ಮ ಸಮಾಜದ ವತಿಯಿಂದ ಶುಕ್ರವಾರ ಲೋಕ ಕಲ್ಯಾಣಾರ್ಥಕವಾಗಿ ನಡೆದ ಗಾಯತ್ರಿದೇವಿ ಹೋಮ ಮತ್ತು ಉಡಿ ತುಂಬುವ ಧಾರ್ಮಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ‘ಕಾಲಕಾಲಕ್ಕೆ ಮಳೆಗಾಗಿ ನಮ್ಮ ಪೂರ್ವಜರು ಹೋಮ, ಹವನಗಳ ಮೊರೆ ಹೋಗುತ್ತಿದ್ದರು ಎಂಬುದರ ಕುರಿತು ಧರ್ಮ ಗ್ರಂಥಗಳಲ್ಲಿ ಉಲ್ಲೇಖಗಳಿವೆ’ ಎಂದು ಹೇಳಿದರು.
ಶಹಾಪುರದ ವಿಶ್ವಕರ್ಮ ಏಕದಂಡಗಿ ಮಠದ ಕಾಳಹಸ್ತೇಂದ್ರ ಸ್ವಾಮೀಜಿ ಮಾತನಾಡಿ, ‘ದೋರನಹಳ್ಳಿ ಗ್ರಾಮದಲ್ಲಿರುವ ಕಾಳಿಕಾ ದೇವಸ್ಥಾನವು ಅತ್ಯಂತ ಪುರಾತನ ಕಾಲದಾಗಿದೆ. ವಿಶ್ವಕರ್ಮ ಸಮಾಜವು ಸದಾ ಧಾರ್ಮಿಕ ಕಾರ್ಯಗಳನ್ನು ಚಾಚು ತಪ್ಪದೆ ನಡೆಸುವ ಮೂಲಕ ತನ್ನದೆ ಪರಂಪರೆ ಹೊಂದಿದೆ. ಧರ್ಮದ ಉಳಿವಿಗೆ ಧರ್ಮದ ಆಚರಣೆಗಳು ಬಹುಮುಖ್ಯವಾಗಿದೆ’ ಎಂದು ಹೇಳಿದರು.
ಬಿಜೆಪಿ ಯುವ ಮುಖಂಡ ಮಹೇಶ ರೆಡ್ಡಿಗೌಡ ಮುದ್ನಾಳ, ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ ಪತ್ತಾರ, ಚಿಕ್ಕಮಠದ ಶಿವಲಿಂಗ ರಾಜೇಂದ್ರ ಶಿವಾಚಾರ್ಯರು, ಹಿರೇಮಠದ ಮಡಿವಾಳ ದೇವರು, ವಿನೋದಗೌಡ ಮಾಲಿ ಪಾಟೀಲ, ನಿಂಗಣ್ಣಗೌಡ ಪಾಟೀಲ, ರಾಘವೇಂದ್ರರಾವ ಕುಲಕರ್ಣಿ, ಸಂಗಣ್ಣ ಕೆ.ಮಲಗೊಂಡ, ತಮ್ಮಣಗೌಡ ಜೋಳದ, ದೇವಿಂದ್ರಪ್ಪ ಗೌಡ ಜೋಳದ, ಷಣ್ಮುಖಪ್ಪ ಕಕ್ಕೇರಿ, ಮಹೇಶ ಪತ್ತಾರ, ತಿಪ್ಪಣ್ಣ ಆಂದೇಲಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.