ADVERTISEMENT

ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2023, 21:09 IST
Last Updated 9 ಸೆಪ್ಟೆಂಬರ್ 2023, 21:09 IST
ಸುರಪುರದಲ್ಲಿ ಶುಕ್ರವಾರ ನಡೆದ ಅಂತರರರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯಲ್ಲಿ ತಹಶೀಲ್ದಾರ್ ವಿಜಯಕುಮಾರ, ಬಿಇಒ ವಸಂತ್ ಇದ್ದರು
ಸುರಪುರದಲ್ಲಿ ಶುಕ್ರವಾರ ನಡೆದ ಅಂತರರರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯಲ್ಲಿ ತಹಶೀಲ್ದಾರ್ ವಿಜಯಕುಮಾರ, ಬಿಇಒ ವಸಂತ್ ಇದ್ದರು   

ಸುರಪುರ: ‘ಅನಕ್ಷರಸ್ಧರಿಗೆ ಅಕ್ಷರ ಜ್ಞಾನ ನೀಡುವ ಮೂಲಕ ಅವರನ್ನು ಕ್ರಿಯಾತ್ಮಕ ಸಾಕ್ಷರರನ್ನಾಗಿ ಮಾಡುವುದು ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಅಗತ್ಯ’ ಎಂದು ತಹಶೀಲ್ದಾರ್ ಕೆ. ವಿಜಯಕುಮಾರ ಹೇಳಿದರು.

ಇಲ್ಲಿಯ ಕನ್ಯಾ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಂತರ ರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಅಕ್ಷರವಂತರಾಗಿ ಸ್ವಾವಲಂಬಿ ಬದುಕಿನೆಡೆಗೆ ಸಾಗಬೇಕು. ಹೀಗಾಗಿ ವಿದ್ಯಾವಂತರು ಅನಕ್ಷರಸ್ಧರಿಗೆ ಅಕ್ಷರ ಕಲಿಸಿ ಸ್ವಾವಲಂಬಿ ಬದುಕು ನಡೆಸುವಂತೆ ಪ್ರೇರಪಿಸಬೇಕು’ ಎಂದು ಹೇಳಿದರು.

ADVERTISEMENT

‘ಸಾಕ್ಷರತೆ ಎಂದರೆ ಓದು, ಬರಹ ಕಲಿಯುವುದರ ಜೊತೆಗೆ ಜಗತ್ತನ್ನು ತಿಳಿದುಕೊಳ್ಳುವ ಪ್ರಕ್ರಿಯೆ. ಸಾಕ್ಷರತೆ ರಾಷ್ಟ್ರೀಯ ಮೌಲ್ಯಗಳ ಅಭಿವೃದ್ಧಿಗೆ ಸಾಧನವಾಗಿದೆ’ ಎಂದು ತಿಳಿಸಿದರು.

ಮುಖ್ಯ ಶಿಕ್ಷಕ ಸೋಮರೆಡ್ಡಿ ಮಂಗ್ಯಾಳ ಅಧ್ಯಕ್ಷತೆ ವಹಿಸಿದ್ದರು. ಬಿಇಒ ವಸಂತ್ ಶಾಬಾದಕರ್, ಕ್ಷೇತ್ರ ಸಮನ್ವಯ ಅಧಿಕಾರಿ ಪಂಡಿತ್ ನಿಂಬೂರ್, ತಾಲ್ಲೂಕು ಸಾಕ್ಷರತಾ ನೋಡಲ್ ಅಧಿಕಾರಿ ಕಾಂತೇಶ್, ಸಿಆರ್‌ಪಿ ಶಿವಕುಮಾರ್, ಎಫ್‍ಡಿಸಿ ಗುರುಬಸಪ್ಪ, ಶಾಲೆಯ ಶಿಕ್ಷಕರು ಇದ್ದರು. ಶಿಕ್ಷಕ ಶ್ರೀಶೈಲ ಯಂಕಂಚಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.