ADVERTISEMENT

ಕಕ್ಕೇರಾ ಪುರಸಭೆ: ಗರಿಗೆದರಿದ ರಾಜಕೀಯ ಗೆಲುವಿನ ಲೆಕ್ಕಾಚಾರ

ಕಕ್ಕೇರಾ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟ

ಮಹಾಂತೇಶ ಸಿ.ಹೊಗರಿ
Published 13 ಆಗಸ್ಟ್ 2024, 5:52 IST
Last Updated 13 ಆಗಸ್ಟ್ 2024, 5:52 IST
ಕಕ್ಕೇರಾ ಪುರಸಭೆ ಕಾರ್ಯಾಲಯ ಕಟ್ಟಡ
ಕಕ್ಕೇರಾ ಪುರಸಭೆ ಕಾರ್ಯಾಲಯ ಕಟ್ಟಡ    

ಕಕ್ಕೇರಾ: ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಘೋಷಣೆಯಾದ ಹಿನ್ನೆಲೆ ಪಟ್ಟಣದಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿದ್ದು, ಆಕಾಂಕ್ಷಿಗಳ ಭವಿಷ್ಯ ಶಾಸಕರ ನಿರ್ಧಾರದ ಮೇಲೆ ನಿಂತಿದೆ.

ಪುರಸಭೆ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ (ಎ) ಹಾಗೂ ಉಪಾಧ್ಯಕ್ಷ ಪರಿಶಿಷ್ಟ ಪಂಗಡಕ್ಕೆ ಮೀಸಲಿದ್ದು, ನೀವು 15 ತಿಂಗಳು ಕಾರ್ಯನಿರ್ವಹಿಸಿ, ಉಳಿದವರಿಗೆ 15 ತಿಂಗಳು ಅಧ್ಯಕ್ಷಸ್ಥಾನ ಮಾಡಬೇಕೆಂಬ ಮಾತುಗಳು ಕೇಳಿಬರುತ್ತಿದ್ದು, ಪುರಸಭೆ ಸದಸ್ಯರ ತೀರ್ಮಾನ ಅಂತಿಮವಾಗಲಿದೆ.

ಒಟ್ಟು 23 ಸದಸ್ಯರಿರುವ ಪುರಸಭೆಗೆ ಕಾಂಗ್ರೆಸ್ 17, ಬಿಜೆಪಿ 6 ಜನ ಸದಸ್ಯರಿದ್ದು, ಕಾಂಗ್ರೆಸ್‌ಗೆ ಬಹುಮತ ಇದೆ. 4ನೇ ವಾರ್ಡ್‌ ಸದಸ್ಯ ಪರಮಣ್ಣ ಕಮತಗಿ ಹಾಗೂ 23ನೇ ವಾರ್ಡ್‌ ಸದಸ್ಯ ಅಯ್ಯಾಳಪ್ಪ ಪೂಜಾರಿ ನಡುವೆ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ADVERTISEMENT

19ನೇ ವಾರ್ಡ್‌ನಿಂದ ಪರಮವ್ವ ನಾಗಪ್ಪ ಮಲಮುತ್ತೇರ ಅವರು ಪ್ರಥಮ ಬಾರಿಗೆ ಪುರಸಭೆ ಸದಸ್ಯರಾಗಿದ್ದು, ಮೀಸಲಾತಿ ನಮಗೂ ಬಂದಿದೆ. ಸದಸ್ಯರು ಬೆಂಬಲಿಸುವರು ಎಂಬ ನಂಬಿಕೆಯಿದೆ. ನಾನು ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎನ್ನುತ್ತಾರೆ.

ಪುರಸಭೆ ಸದಸ್ಯರಾದ ದೇವಿಂದ್ರಪ್ಪ ದೇಸಾಯಿ, ಜಟ್ಟೆಪ್ಪ ದಳಾರ, ಪರಶುರಾಮ ಗೋವಿಂದರ್, ಹೊಸೂರು ಅಮರೇಶ ದೊರೆ ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಅಧ್ಯಕ್ಷ ಸ್ಥಾನದ ಚುನಾವಣೆ ಕುತೂಹಲದಿಂದ ಸಾರ್ವಜನಿಕರು ನೋಡುತ್ತಿದ್ದಾರೆ. ಈಗಾಗಲೇ ಆಕಾಂಕ್ಷಿಗಳು ದೇವಸ್ಥಾನ ಹಾಗೂ ಶಾಸಕರ ಭೇಟಿ ನೀಡಿ ಚರ್ಚಿಸುತ್ತಿದ್ದಾರೆ.  ಮುಖಂಡರ ಮನವೊಲಿಸುವ ಕಾರ್ಯವೂ ನಡೆದಿದೆ. ಚುನಾವಣೆ ದಿನಾಂಕ ನಂತರ ಅಂತಿಮ ತೀರ್ಮಾನ ಹೊರಬೀಳಲಿದೆ.

30 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿ ಕೆಲಸ ಮಾಡಿದ್ದೇನೆ. ಕಾಮಗಾರಿ ಜನಪ್ರಿಯ ಕೆಲಸಗಳನ್ನು ಮಾಡಿದ್ದು ನಾನೂ ಅಧ್ಯಕ್ಷ ಸ್ಥಾನದ ಆಕಾಂಕ್ಷಿ
–ಪರಮಣ್ಣ ಕಮತಗಿ, ಪುರಸಭೆ ಸದಸ್ಯ
ಸದಸ್ಯರ ಬೆಂಬಲ ಹಾಗೂ ಶಾಸಕ ರಾಜಾ ವೆಂಕಟಪ್ಪನಾಯಕ ಮಾತು ಕೊಟ್ಟಿದ್ದರು. ಹೀಗಾಗಿ ತೆರೆಮರೆಯಲ್ಲಿ ಬೆಂಬಲವಿದ್ದು ಶೀಘ್ರವೇ ಏನಾಗುತ್ತದೆ
–ಅಯ್ಯಾಳಪ್ಪ ಪೂಜಾರಿ, ಪುರಸಭೆ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.